Visitors have accessed this post 220 times.

ಮರಿಲ್ ಇ ಎಸ್ ಆರ್ ಪ್ರೆಸಿಡೆನ್ಸಿ ವಿದ್ಯಾ ಸಂಸ್ಥೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವ್ಯಾಪಾರ ಮೇಳ

Visitors have accessed this post 220 times.

ಪುತ್ತೂರಿನ ಮರಿಲಿನಲ್ಲಿರುವ ಇ ಎಸ್ ಆರ್ ಪ್ರೆಸಿಡೆನ್ಸಿ ವಿದ್ಯಾಸಂಸ್ಥೆಯಲ್ಲಿ ದಿನಾಂಕ 16 ನವೆಂಬರ್ 2023 ಗುರುವಾರದಂದು ಶಾಲಾ ಸಂಚಾಲಕರಾದ ಶ್ರೀಯುತ ಝಕಿರ್ ಹುಸೇನ್ ರವರ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವ್ಯಾಪಾರ ಮೇಳ ಕಾರ್ಯಕ್ರಮವನ್ನು ಶಾಲಾ ನಾಯಕರು ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ Maqsood ರವರು ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರು ಹಾಗೂ ಪೋಷಕರು, ಶಿಕ್ಷಕರು ಮತ್ತು ಎಲ್ಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.

ಪೋಷಕರ ಸಹಕಾರದೊಂದಿಗೆ , Earth, Mars, Jupirer ಮೂರು ತಂಡದ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವ್ಯಾಪಾರ ಮೇಳವನ್ನು ಬಹಳ ಉತ್ಸಾಹದೊಂದಿಗೆ ಹಮ್ಮಿಕೊಳ್ಳಲಾಯಿತು. ಜ್ಞಾನದೊಂದಿಗೆ ವಿಜ್ಞಾನವನ್ನು ಪರಿಚಯಿಸಿ ಅದರಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ಆಸಕ್ತಿ ಬರುವಂತೆ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಕ್ಕಳು ತಾವು ಮಾಡಿದಂತಹ ವಿಜ್ಞಾನ ಮಾದರಿಯನ್ನು ಬಂದಂತಹ ಅತಿಥಿಗಳಿಗೆ ವಿವರಿಸಿದ್ದರು. ಇದರ ಜೊತೆಗೆ ವ್ಯವಹಾರಿಕ ಜ್ಞಾನವನ್ನು ಮೂಡಿಸುವ ಉದ್ದೇಶದಿಂದ ಮಕ್ಕಳು ತಾವು ತo ದ oತಹ ವಸ್ತುಗಳನ್ನು ಬಹಳ ಉತ್ಸಾಹದಿಂದ ವ್ಯಾಪಾರ ಮಾಡಿ ಸಂತೋಷಪಟ್ಟರು. ಸ್ಪರ್ಧೆಯಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರು ಆಗಿರುವ ಶ್ರೀಮತಿ ಶೈಭಾ, ಶ್ರೀಮತಿ ಝರಿನಾ, ಮತ್ತು ಶ್ರೀಮತಿ ಸುನೈನ ರವರು ತೀರ್ಪುಗಾರರಾಗಿ ಭಾಗವಹಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಶ್ರೀಯುತ ಜಾಕಿರ್ ಹುಸೇನ್ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸಿರಾಜ್ ಕೆ ಎ, ಉಪಾಧ್ಯಕ್ಷರಾದ ಶ್ರೀಮತಿ ಶಾಹಿದ ವಿಕೆ ಷರೀಫ್, ಹಮೀದ್ ಹಾಗೂ ಶಾಲಾ ನಾಯಕರುಗಳಾದ ಜಿಶಾನ್ ಇಬ್ರಾಹಿಂ ಮತ್ತು ಮಹಮ್ಮದ್ ಹಸನ್ ಫಹ್ಮಾನ್ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ತಾಜುನ್ನಿಸಾ ರವರು ಬಂದಂತಹ ಅತಿಥಿಗಳನ್ನು ನೆಹರು ಟೋಪಿ ನೀಡುವುದರ ಮೂಲಕ ಸ್ವಾಗತಿಸಿ ಮಕ್ಕಳು ದೇಶದ ಕನಸು ಅವರನ್ನು ಹೂವಿನಂತೆ ಪ್ರೀತಿಸಿ ಆರೈಕೆ ಮಾಡಿರಿ . ಅಂತಹ ಮಕ್ಕಳು ಭಾವಿ ವಿಜ್ಞಾನಿಗಳಾಗುವರು ಎಂದು ಬಂದಂತಹ ಪೋಷಕರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರು ಮಾತನಾಡಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ವಿಜ್ಞಾನದ ಮಾದರಿಗಳನ್ನು ಮಾಡಿಸುವುದರ ಮೂಲಕ ಮಕ್ಕಳಿಗೆ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿಯು ಮೂಡಿ ಬರುತ್ತದೆ ಎನ್ನುತ್ತಾ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಕ್ಕಳನ್ನು ಪ್ರಶಂಶಿಸಿದರು. ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಹಮ್ಮಿದ್ ರವರು ಮಕ್ಕಳ ದಿನಾಚರಣೆ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ನಮ್ಮ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸಿರಾಜ್ ಎ ಕೆ.ರವರು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅವರ ಪರವಾಗಿ ಬಹುಮಾನ ವನ್ನು ನೀಡಿದರು.ನಮ್ಮ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ವಿಕೆ ಶರೀಫ್ ರವರು ವಂದನಾರ್ಪಣೆಗೈದರು. ಶಿಕ್ಷಕಿ ಶ್ರೀಮತಿ ಸುಶಾಂತಿಯರು ಕಾರ್ಯಕ್ರಮವನ್ನು ನಿರೂಪಿಸಿದರು . ಶಿಕ್ಷಕರು ಹಾಗೂ ಶಿಕ್ಷಕ ಕೇತರ ಸಿಬ್ಬಂದಿಗಳು ಸಹಕರಿಸಿದರು.

Leave a Reply

Your email address will not be published. Required fields are marked *