Visitors have accessed this post 702 times.
ಮಂಗಳೂರು: ಹಿದಾಯ ಫೌಂಡೇಶನ್ ಜುಬೈಲ್ ಘಟಕದ ವತಿಯಂದ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನದಲ್ಲಿ ಹೊರಟಿದ್ದ ಅಕ್ಷರ ಸಂತ, ಪದ್ಮಶ್ರೀ ಹರೇಕಳ ಹಾಜಬ್ಬರನ್ನು ವಿಮಾನದ ಸಿಬ್ಬಂದಿ ಅಭಿನಂದಿಸಿ ಗೌರವ ಸಲ್ಲಿಸಿದರು.
ಹರೇಕಳ ಹಾಜಬ್ಬ ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನದಲ್ಲಿ ಮಂಗಳೂರಿನಿಂದ ದಮ್ಮಾಮ್ ಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರನ್ನು ಗುರುತಿಸಿದ ಏರ್ ಇಂಡಿಯ ಎಕ್ಸ್ ಪ್ರೆಸ್ ನ ಸಿಬ್ಬಂದಿ , ಕ್ಯಾಪ್ಟನ್ ನ ಗಮನಕ್ಕೆ ತಂದರು.
ಬಳಿಕ ಕ್ಯಾಪ್ಟನ್ ವಿಮಾನದಲ್ಲಿರುವ ಪ್ರಯಾಣಿಕರಿಗೆ ಹಾಜಬ್ಬರನ್ನು ಪರಿಚಯಿಸುತ್ತಾ, “ಶಿಕ್ಷಣ ರಂಗದಲ್ಲಿ ಅಪೂರ್ವ ಸೇವೆ ಸಲ್ಲಿಸಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ನಮ್ಮ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ನಮಗೆಲ್ಲ ತುಂಬಾ ಸಂತೋಷ ತಂದಿದೆ. ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.