October 13, 2025
WhatsApp Image 2023-11-23 at 6.09.36 PM

ಉಡುಪಿ : ಉಡುಪಿ ಜಿಲ್ಲೆಯನ್ನೇ ಬೆಚ್ಚಿಬಿಳಿಸಿದ್ದ ನೇಜಾರಿನ ತೃಪ್ತಿ ನಗರದಲ್ಲಿ ನಡೆದ ನಾಲ್ವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಎಸ್ಪಿ ಇಂದು ಮಾಹಿತಿ ನೀಡಿದ್ದು, ಕೊಲೆಯಾದ ಗಗನಸಖಿ ಆಯ್ನಾಝ್ ಮತ್ತು ಹಂತಕ ಪ್ರವೀಣ್ ಗೆ 8 ತಿಂಗಳಿನಿಂದ ಪರಿಚಯವಿದ್ದು, .ಒಂದು ತಿಂಗಳಿಂದ ಸರಿಯಾಗಿ ಮಾತನಾಡದ ಕಾರಣ ಪೊಸೆಸಿವ್ ನೆಸ್ ನಿಂದ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಉಡುಪಿ ಮಾತನಾಡಿದ ಎಸ್‌ಪಿ ಡಾ. ಅರುಣ್ ಕೆ ಅವರು ತೃಪ್ತಿ ನಗರದಲ್ಲಿ ನಡೆದ ಕೊಲೆ ಪ್ರಕರಣ ಭೇದಿಸಲು ಒಟ್ಟು 11 ತಂಡ ರಚನೆ ಮಾಡಿದ್ದೆವು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಎಲ್ಲಾ ಕಡೆಯಿಂದ ಮಾಹಿತಿ ಬಂದ ಕಾರಣ ಎಲ್ಲವನ್ನು ತನಿಖೆ ಮಾಡಿದ್ದೇವೆ. ನಾಲ್ವರ ಕೊಲೆ ಪ್ರಕರಣ ದೊಡ್ಡ ಸವಾಲಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾದ ಪ್ರಕರಣ ಇದಾಗಿತ್ತು. ನಾವು ತಂಡವಾಗಿ ಕೆಲಸ ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಚಾರ್ಜ್ ಶೀಟ್ ಸಲ್ಲಿಕೆಗೆ ಇನ್ನೂ 70-80 ದಿನ ಇದೆ. ಎಲ್ಲಾ ಸಾಕ್ಷಿಗಳ ಸಂಗ್ರಹ ಮಾಡುತ್ತಿದ್ದೇವೆ. ಸುಮಾರು 50 ಪೊಲೀಸರು ಇದರ ಹಿಂದೆ ಕೆಲಸ ಮಾಡಿದ್ದಾರೆ ಎಂದರು.

ಕೊಲೆಗೆ ಕಾರಣದ ಬಗ್ಗೆ ತಿಳಿಸಿದ ಅವರು ಆರೋಪಿ ಪ್ರವೀಣ್ ಮತ್ತು ಅಯ್ನಾಝ್ ಗೆ ಎಂಟು ತಿಂಗಳಿನಿಂದ ಪರಿಚಯವಿತ್ತು. ಇಬ್ಬರಿಗೂ ಮಧ್ಯೆಯಲ್ಲಿ ಗೆಳೆತನವಿತ್ತು. ಪ್ರವೀಣ್ – ಅಯ್ನಾಝ್ ಗೆ ಹಲವಾರು ಸಹಾಯ ಮಾಡದ್ದಾರೆ. ಆದರೆ ಒಂದು ತಿಂಗಳಿಂದ ಸರಿಯಾಗಿ ಮಾತನಾಡುತ್ತಿರಲಿಲ್ಲ. ಹೀಗಾಗಿ ಪ್ರವೀಣ್ ಪೊಸೆಸಿವ್ ನೆಸ್ ನಿಂದ ಕೊಲೆ ಮಾಡಬೇಕೆಂದು ಬಂದಿದ್ದಾನೆ. ಮೊದಲು ಪ್ರವೀಣ್ ಅಂದು ಆರಂಭದಲ್ಲಿ ಅಯ್ನಾಝ್ ಗೆ ಮೊದಲು ದಾಳಿ ಮಾಡುತ್ತಾನೆ. ಹಸೀನಾ, ಅಫ್ನಾನ್, ಆಸಿಂ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಒಂದೇ ಚಾಕುವಿನಲ್ಲಿ ನಾಲ್ವರ ಕೊಲೆಗೈದಿದ್ದಾನೆ. ಬಳಿಕ ಬೇರೆ ಬೇರೆ ವಾಹನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪರಾರಿಯಾಗಿದ್ದಾನೆ. ಇಂದು ಗಂಭೀರ ಪ್ರಕರಣವಾದ ಹಿನ್ನಲೆ ಎಲ್ಲಾ ಮಾಹಿತಿ ಮಾಧ್ಯಮಕ್ಕೆ ಕೊಡಲು ಸಾಧ್ಯವಿಲ್ಲ ಎಂದು ಎಸ್.ಪಿ ಹೇಳಿದರು.
ಹಸೀನಾ ಗೆ ಆರ್ಥಿಕ ಮೋಸವಾದ ಬಗ್ಗೆ ಮಾಹಿತಿ ಸಿಕ್ಕಿದೆ. ಕುಟುಂಬದಿಂದ ದೂರು ಪಡೆದುಕೊಂಡು ತನಿಖೆ ಮಾಡುತ್ತೇವೆ ಎಂದರು

About The Author

Leave a Reply