Visitors have accessed this post 497 times.

ಕಾಂಗ್ರೆಸ್ ಕಾರ್ಯಕರ್ತರ ಭಾರೀ ಅಸಮಾಧಾನ- ಡಾ.ಮೋಹನ್ ಆಳ್ವರು ಆಯೋಜಿಸಿದ್ದ ಉಪಹಾರ ಕೂಟವನ್ನು ಸಚಿವ ರದ್ದುಪಡಿಸಿದ ಬೈರತಿ ಸುರೇಶ್

Visitors have accessed this post 497 times.

ಮೂಡುಬಿದಿರೆ: ಮಂಗಳೂರು ನಗರಕ್ಕೆ ಸರ್ಕಾರಿ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಮೋಹನ್‌ ಆಳ್ವ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಶುಕ್ರವಾರದ ಬೆಳಗ್ಗಿನ ಉಪಹಾರ ಕೂಟವನ್ನು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಭಾರೀ ಅಸಮಾಧಾನದ ಹಿನ್ನೆಲೆಯಲ್ಲಿ ರದ್ದುಪಡಿಸಿದ ವಿದ್ಯಮಾನ ನಡೆದಿದೆ.

ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಶುಕ್ರವಾರ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜು‌ಕೊಳ ಉದ್ಘಾಟನೆಗಾಗಿ ನಗರಕ್ಕೆ ಆಗಮಿಸಿದ್ದರು, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ‌ ಮುಖ್ಯಸ್ಥ ಮೋಹನ್‌ ಆಳ್ವ ಅವರ ನಿವಾಸದಲ್ಲಿ ಸಚಿವರಿಗೆ ಬೆಳಗ್ಗಿನ ಉಪಾಹಾರ ಕೂಟ ಏರ್ಪಡಿಸಲಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಅವರ ಉಮೇದುವಾರಿಕೆ‌ ಸಲ್ಲಿಸುವಾಗಲೂ ಜೊತೆಯಾಗಿದ್ದ ಡಾ. ಮೋಹನ್ ಆಳ್ವರ ನಿವಾಸದಲ್ಲಿ ಸಚಿವರು ಉಪಹಾರ ಕೂಟದಲ್ಲಿ ಪಾಲ್ಗೊಳ್ಳೂವುದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವುಂಟು ಮಾಡಿತ್ತು‌. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಗಿತ್ತು. ಚುನಾವಣೆಯಲ್ಲಿ ನೇರವಾಗಿ ಬಿಜೆಪಿಯನ್ನು ಬೆಂಬಲಿಸಿದವರ ಮನೆಗೆ ಸಚಿವರು ಹೋಗುವುದು ಸರಿಯಲ್ಲ ಎಂಬ ಅಭಿಪ್ರಾಯ ಕಾರ್ಯಕರ್ತರಿಂದ ಬಂದಿತ್ತು. ಬಿಜೆಪಿ ಬೆಂಬಲಿಗರ ನಿವಾಸದಲ್ಲಿ ಉಪಹಾರ ಕೂಟ ಏರ್ಪಡಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಕೈ ಕಾರ್ಯಕರ್ತರು ಪಕ್ಷದ ಮುಖಂಡರಲ್ಲಿ ಅಸಾಮಾಧಾನ ಹೇಳಿಕೊಂಡಿದ್ದರು. ಜೊತೆಗೆ ಸಚಿವರ ಕಾರ್ಯಕ್ರಮದಲ್ಲಿ ಭಾಗವಹಿಸದೇ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದರು.ಈ ಹಿನ್ನೆಲೆಯಲ್ಲಿ ಬೆಳಗ್ಗೆ ತರಾತುರಿಯಲ್ಲಿ ಡಾ. ಮೋಹನ್ ಆಳ್ವ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಉಪಾಹಾರ ಕೂಟವನ್ನು ರದ್ದುಗೊಳಿಸಿದ್ದು. ಈ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಂಡಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *