October 13, 2025
WhatsApp Image 2023-11-25 at 11.52.01 AM

ಮಂಗಳೂರು: ಮರಣ ದೃಢೀಕರಣ ಪತ್ರಕ್ಕಾಗಿ ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ಲೆಕ್ಕಾಧಿಕಾರಿಯನ್ನು (ವಿಎ) ಶುಕ್ರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಚೇಳ್ಯಾರು ಗ್ರಾಮ ಪಂಚಾಯಿತಿಯ ವಿಎ ವಿಜಿತ್ ಎಂದು ಗುರುತಿಸಲಾಗಿದೆ ದೂರುದಾರರಿಂದ 13,000 ರೂ. ಲಂಚ ಪಡೆಯುತ್ತಿದ್ದ. ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿ, ಲಂಚದ ಹಣ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಲೋಕಾಯುಕ್ತ ಎಸ್ಪಿ ಸಿ.ಎ. ಸೈಮನ್ ತಿಳಿಸಿದ್ದಾರೆ. ದೂರುದಾರರು ತನ್ನ ತಾಯಿಯ ಹೆಸರಿನಲ್ಲಿರುವ ಜಮೀನನ್ನು ಮಾರಾಟಕ್ಕೆ ತೀರ್ಮಾನಿಸಿದ್ದರು. ಈ ಬಗ್ಗೆ ದಾಖಲಾತಿಗಾಗಿ ಅಜ್ಜನ ಮರಣ ಪ್ರಮಾಣ ಪತ್ರ ಹಾಗೂ ಸಂತತಿ ನಕ್ಷೆ ಮಾಡುವಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಿಳಿಸಲಾಗಿತ್ತು. ಅದರಂತೆ ಸೆಪ್ಟೆಂಬರ್‌ನಲ್ಲಿ ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಅಜ್ಜನ ಮರಣದ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸಿದರು.ಬಳಿಕ ದೂರುದಾರರು ಕಚೇರಿಗೆ ಎರಡು ಮೂರು ಬಾರಿ ಹೋಗಿ ವಿಚಾರಿಸಿದರೂ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನ.20ರಂದು ಗ್ರಾಮ ಆಡಳಿತ ಅಧಿಕಾರಿಯ ಮೊಬೈಲ್‌ ಗೆ ಕರೆ ಮಾಡಿ ವಿಚಾರಿಸಿದಾಗ ದೃಢೀಕರಣ ಪತ್ರ ಸಿದ್ಧವಿದೆ, 15,000 ರೂ. ತರುವಂತೆ ತಿಳಿಸಿದ್ದಾರೆನ್ನಲಾಗಿದೆ. ಆದರೆ ತನ್ನಲ್ಲಿ ಅಷ್ಟು ಹಣ ಇಲ್ಲ ಎಂದಾಗ ನಾಳೆ ಕೊಡಿ ಎಂದು ತಿಳಿಸಿದ್ದರು. ನ.22ರಂದು ದೂರುದಾರರು ಚೇಳ್ಯಾರು ಗ್ರಾಮ ಕರಣಿಕರ ಕಚೇರಿಗೆ ಹೋಗಿ ಪಿಡಿಒ ಬಳಿ ಮಾತನಾಡಿದಾಗ, ಮರಣ ದೃಢೀಕರಣ ಪತ್ರ ನೀಡಿ 15,000 ರೂ. ನಾಡಕಚೇರಿಗೆ ಒಂದು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ತಮ್ಮಲ್ಲಿ ಸ್ವಲ್ಪ ಹಣ ಕಡಿಮೆ ಎಂದಾಗ ಎರಡು ಸಾವಿರ ಕಡಿಮೆ ಮಾಡಿ ಕೊಡಿ ಎಂದು ಹೇಳಿದ್ದರೆನ್ನಲಾಗಿದೆ. ಅದರಂತೆ ದೂರುದಾರರಿಂದ ವಿಎ ವಿಜಿತ್ 13,000 ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಪೊಲೀಸ್ ಎಸ್ಪಿ ಸಿ,ಎ ಸೈಮನ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್‌ ತಾಣೆಯ ಉಪಾಧೀಕ್ಷಕ ಚಲುವರಾಯ ಬಿ. ಹಾಗೂ ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಪಿ., ಸುರೇಶ್ ಪಿ. ಅವರು ಸಿಬ್ಬಂದಿ ಜತೆ ಕಾರ್ಯಾಚರಣೆ ನಡೆಸಿದ್ದಾರೆ.

About The Author

Leave a Reply