October 12, 2025
WhatsApp Image 2023-11-26 at 10.37.50 AM

ಬೆಂಗಳೂರು: ಬೆಂಗಳೂರು ನಗರದ ಸಿಗ್ನಲ್ ಗಳ ಬ್ಯಾಟರಿ ಕಳವು ಮಾಡಿ ಗುಜರಿಗೆ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ ಮೂಲದ ಸೈಫ್ ಪಾಷಾ ಮತ್ತು ಸಲ್ಮಾನ್ ಖಾನ್ ಆರೋಪಿಗಳಾಗಿದ್ದು ಇವರನ್ನು ಬಂಧಿಸಲಾಗಿದೆ, ಇವರಿಂದ ಒಟ್ಟು ಐದು ಲಕ್ಷ ಮೌಲ್ಯದ 80 ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಬ್ಯಾಟರಿ ಕಳ್ಳತನ ಮಾಡಿದ ನಂತರ ಅದನ್ನು ಗುಜರಿಗಳಲ್ಲಿ ಮಾರಾಟ ಮಾಡುತ್ತಿದ್ದರು ಮತ್ತು ಬಂದ ಹಣದಿಂದ ಮೋಜು ಮಸ್ತಿ ಮಾಡುತ್ತಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಕಳೆದ ಕೆಲವು ತಿಂಗಳಿಂದ ನಗರದ ಹಲವು ಜಂಕ್ಷನ್​ಗಳಲ್ಲಿ ಸಿಗ್ನಲ್​ಗಳಿಗೆ ಅಳವಡಿಸಿದ್ದ ಬ್ಯಾಟರಿಗಳು ಕಳ್ಳತನವಾಗಿದ್ದವು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಠಾಣಾ ಪೊಲೀಸರು, ಬರೋಬ್ಬರಿ 120 ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಚಲನವಲನಗಳು ಪತ್ತೆಯಾಗಿವೆ.

About The Author

Leave a Reply