ಉಡುಪಿ : ನೇಜಾರು ಹತ್ಯಾಕಾಂಡ ಪ್ರಕರಣದ ವರದಿಗಳಲ್ಲಿ ಕೊಲೆಯಾದ ಆಯ್ನಾಝ್, ಆರೋಪಿಯ ಸ್ಕೂಟರ್ ಬಳಸುತ್ತಿದ್ದ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದು ಈ ಬಗ್ಗೆ ಮೃತ ಅಯ್ನಾಝ್ ತಂದೆ ನೂರ್ ಮುಹಮ್ಮದ್ ಪ್ರತಿಕ್ರಿಯಿಸಿದ್ದಾರೆ. ಅಯ್ನಾಝ್ ಬಳಸುತ್ತಿದ್ದ ಸ್ಕೂಟರ್ ಪ್ರವೀಣ್ ಚೌಗಲೆ ದ್ದು ನಿಜ ಆದ್ರೆ ಆ ಸ್ಕೂಟರ್ ಅನ್ನು ನಾವು ಅವರಿಗೆ 28 ಸಾವಿರ ರೂ.
ಹಣ ಕೊಟ್ಟು ಖರೀದಿಸಿದ್ದೆವು ಎಂದು ಹೇಳಿದ್ದಾರೆ.
ಆರೋಪಿ ಪ್ರವೀಣ್ ಚೌಗಲೆ ಅಯ್ನಾಝ್ ಒಟ್ಟಿಗೆ ಕೆಲಸ ಮಾಡುತ್ತಿದ್ದು ಆತ ಸೀನಿಯರ್ ಆಗಿದ್ದ ಮಂಗಳೂರಿನಲ್ಲಿ ಅಷ್ಟೊಂದು ಪರಿಚಯ ಇಲ್ಲಕಾರಣ ಬಾಡಿಗೆ ಅಪಾರ್ಟ್‌ಮೆಂಟ್ ಹುಡುಕಲು ಸಹಾಯ ಮಾಡಿದ್ದನು. ನಾನು ಕಳುಹಿಸಿದ ಹಣದಲ್ಲಿ ಅಡ್ವಾನ್ಸ್ ಕೊಟ್ಟು ಅಪಾರ್ಟ್ ಮೆಂಟ್ ಬಾಡಿಗೆಗೆ ಪಡೆಯಲಾಗಿತ್ತು. ಮತ್ತು ಪ್ರವೀಣನ ಹಳೆಯ ಸ್ಕೂಟರನ್ನು ಅಯ್ನಾಝ್ ಬಳಸುತ್ತಿದ್ದಳು ಆದ್ರೆ ಅದನ್ನು ಹಣ ಕೊಟ್ಟು ಖರೀದಿಸಿದ್ದೇವೆ. ನಮ್ಮ ಹೆಸರಿಗೆ ನೋಂದಣಿ ಮಾಡಿಕೊಳ್ಳಲು ತಡವಾಗಿತ್ತು. ಹಾಗಾಗಿ ಆತನ ಹೆಸರಿನಲ್ಲೇ ಸ್ಕೂಟರ್ ಇತ್ತು. ಆ ಸ್ಕೂಟರನ್ನು ಪುತ್ರಿಯರು ಸ್ಥಳೀಯವಾಗಿ ಸಂಚರಿಸಲು ಉಪಯೋಗಿಸುತ್ತಿದ್ದರು ಎಂದು ನೂರ್ ಮುಹಮ್ಮದ್ ಹೇಳಿದ್ದಾರೆ.