Visitors have accessed this post 458 times.

ನಟ ಸಲ್ಮಾನ್​​​ ಖಾನ್​​ಗೆ ಜೀವ ಬೆದರಿಕೆ : ‘ವೈ ಪ್ಲಸ್’ ಭದ್ರತೆ

Visitors have accessed this post 458 times.

ಮುಂಬೈ ಸಲ್ಮಾನ್ ಖಾನ್ ಅವರ ವೃತ್ತಿ ಜೀವನ ಮಾತ್ರವಲ್ಲದೆ, ವೈಯಕ್ತಿಕ ಕಾರಣಕ್ಕೂ ಸುದ್ದಿಯಲ್ಲಿರುತ್ತಾರೆ. ಆದರೆ ಸದ್ಯ ಸಲ್ಮಾನ್ ಸುದ್ದಿಯಲ್ಲಿರುವುದು ಈ ಕಾರಣಕ್ಕಾಗಿ ಅಲ್ಲ, ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್ ಅವರೊಂದಿಗೆ ನಟ-ಗಾಯಕ ಗಿಪ್ಪಿ ಗ್ರೆವಾಲ್ ಜೊತೆ ಕ್ಲೋಸ್​​ ಆಗಿರುವುದಕ್ಕೆ ಗಿಪ್ಪಿ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದ್ದರು.

ಆದ್ದರಿಂದ ಮುಂಬೈ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಈ ಬೆದರಿಕೆಯ ನಂತರ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕೆನಡಾದಲ್ಲಿ ಗಿಪ್ಪಿ ಗ್ರೆವಾಲ್ ಮನೆ ಮೇಲೆ ನಡೆದ ದಾಳಿಯ ಹಿಂದೆ ಸಲ್ಮಾನ್ ಖಾನ್ ಜೊತೆಗಿನ ನಿಕಟತೆಯೇ ಕಾರಣ ಎಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೇಳಿದ ನಂತರ, ಭಾಯಿಜಾನ್ ಅಭಿಮಾನಿಗಳ ಚಿಂತೆ ಮತ್ತೆ ಹೆಚ್ಚಾಗಿದೆ. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆಗಳು ಬಂದಿದ್ದು, ಇಂದು ಮುಂಬೈ ಪೊಲೀಸರು ಸಲ್ಮಾನ್ ಸೆಕ್ಯೂರಿಟಿ ಹೆಚ್ಚಿಸಿದ್ದಾರೆ. ಜತೆಗೆ ಎಚ್ಚರವಾಗಿರಲು ಸಹ ಕೇಳಲಾಗಿದೆ. ಸದ್ಯ ನಟನಿಗೆ ವೈ ಪ್ಲಸ್ ಭದ್ರತೆ ನೀಡಲಾಗಿದೆ.

ಪರಿಶೀಲನೆಯನ್ನು ದೃಢೀಕರಿಸಿದ ಹಿರಿಯ ಅಧಿಕಾರಿಯೊಬ್ಬರು, ‘ಬೆದರಿಕೆಯ ನಂತರ, ಯಾವುದೇ ಲೋಪದೋಷಗಳು ಉಳಿಯದಂತೆ ನೋಡಿಕೊಳ್ಳಲು ನಟನ ಭದ್ರತೆಯನ್ನು ಪರಿಶೀಲಿಸಲಾಗಿದೆ. ನಾವು ಅವರನ್ನೂ ಸಂಪರ್ಕಿಸಿದ್ದೇವೆ ಮತ್ತು ಎಚ್ಚರಿಕೆ ವಹಿಸುವಂತೆ ಕೇಳಿಕೊಂಡಿದ್ದೇವೆ ಮತ್ತು ಅವರ ಸುರಕ್ಷತೆಯ ಬಗ್ಗೆ ಕೆಲವು ವಿಷಯಗಳನ್ನು ಚರ್ಚಿಸಿದ್ದೇವೆ’ ಎಂದರು. ಈ ಹಿಂದೆ, ಲಾರೆನ್ಸ್ ಬಿಷ್ಣೋಯ್ ಹೆಸರಿನ ಫೇಸ್‌ಬುಕ್ ಖಾತೆಯು ಕೆನಡಾದಲ್ಲಿ ಜಿಪ್ಪಿ ಗ್ರೆವಾಲ್ ಅವರ ಮನೆಯ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಲಾರೆನ್ಸ್ ಬಿಷ್ಣೋಯ್ ಅವರ ಸಂದೇಶದ ನಂತರ, ಗಿಪ್ಪಿ ಗ್ರೆವಾಲ್ ಅವರು ಸಲ್ಮಾನ್ ಖಾನ್ ಅವರೊಂದಿಗೆ ಯಾವುದೇ ನಿಕಟ ಸಂಬಂಧವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಅವರು, ‘ನನಗೆ ಸಲ್ಮಾನ್ ಖಾನ್ ಜೊತೆ ಯಾವುದೇ ಸ್ನೇಹವಿಲ್ಲ ಮತ್ತು ಅವರ ಕೋಪವನ್ನು ನನ್ನ ಮೇಲೆ ಹೊರಹಾಕಲಾಗುತ್ತಿದೆ. ನನಗೆ, ಇದು ಇನ್ನೂ ಆಘಾತಕಾರಿಯಾಗಿದೆ ಮತ್ತು ನನಗೆ ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ’ ಎಂದಿದ್ದರು.

Leave a Reply

Your email address will not be published. Required fields are marked *