
ಪದೇ ಪದೇ ಮೊಬೈಲ್ ನೋಡುತ್ತಿದ್ದ ಪುತ್ರನನ್ನು ತಂದೆಯೇ ಕೊಲೆ ಮಾಡಿದ ಘಟನೆ ಮೈಸೂರಿನ ಬನ್ನಿಮಂಟಪ ಬಡಾವಣೆಯಲ್ಲಿ ನಡೆದಿದೆ.



ಉಮೇದ್(22) ಕೊಲೆಯಾದವ. ಆತನ ತಂದೆ ಅಸ್ಲಾಂ ಪಾಷನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ ಮನೆಯಲ್ಲಿ ತಾಯಿಯ ಮೊಬೈಲ್ ತೆಗೆದುಕೊಂಡು ಉಮೇದ್ ನೋಡುತ್ತಿದ್ದ.
ತಂದೆ ಅಸ್ಲಾಂ ಪಾಷ ಆಕ್ಷೇಪಿಸಿ ಮೊಬೈಲ್ ನೋಡದಂತೆ ಎಚ್ಚರಿಕೆ ನೀಡಿದ್ದಾರೆ.
ಆದರೆ ಇದನ್ನು ಕೇಳದ ಉಮೇದ್ ಮೊಬೈಲ್ ನೋಡುವುದನ್ನು ಮುಂದುವರೆಸಿದ್ದಾನೆ. ಆಗ ತಂದೆ ಮಗನ ನಡುವೆ ಜಗಳವಾಗಿದ್ದು, ಅಸ್ಲಂ ಸಿಟ್ಟಿನಿಂದ ಚಾಕು ತೆಗೆದುಕೊಂಡು ಮಗನಿಗೆ ಇರಿದಿದ್ದಾನೆ ಎನ್ನಲಾಗಿದೆ. ಎನ್.ಆರ್. ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.