Visitors have accessed this post 496 times.

ಕರ್ತವ್ಯನಿರತ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಹೃದಯಾಘಾತದಿಂದ ಸಾವು

Visitors have accessed this post 496 times.

ಚಿಕ್ಕಮಗಳೂರು : ಕರ್ತವ್ಯನಿರತ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಹೆಸಗೊಡ್ ಗ್ರಾಮದ ಬಳಿ ನಡೆದಿದೆ.

ಕೊಪ್ಪಳದ ಕೂಕ್ನೂರ್ ಗ್ರಾಮದ ನಿವಾಸಿ, ಚಾಲಕ ರವಿ ಲಮಾಣಿ (46) ಮೃತಪಟ್ಟ ಚಾಲಕ.

ಮೂಡಿಗೆರೆ, ಗುತ್ತಿಹಳ್ಳಿ, ಹೆಸ್ಗೋಡ್ ಗ್ರಾಮಕ್ಕೆ ಹೋಗುವ ದಾರಿ ಮಧ್ಯೆ ಈ ಘಟನೆ ನಡೆದಿದ್ದು, ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತೀವ್ರ ಎದೆ ನೋವಿನಿಂದ ಚಾಲಕ ರಸ್ತೆ ಮಧ್ಯೆ ಬಸ್ ನಿಲ್ಲಿಸಿದ.

 

ಈ ವೇಳೆ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಮಾರ್ಗ ಮಧ್ಯೆ ಚಾಲಕ ರವಿ ಲಮಾಣಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published. Required fields are marked *