Visitors have accessed this post 461 times.
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯೊಳಗೆ ಡಾಮಾರು ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರವುದರಿಂದ ಗಂಭೀರವಾಗಿ ಪರಿಗಣಿಸಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನಗಳು ಸಂಚರಿಸುವ ಪ್ರಮುಖ ಹಾಗೂ ಅಡ್ಡ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಸಲುವಾಗಿ ಪ್ಯಾಕೇಜ್‍ವಾರು ತೇಪೆ ಡಾಮಾರೀಕರಣ ಕಾಮಗಾರಿಯನ್ನು ಈಗಾಗಲೇ ಕೈಗೊಳ್ಳಲಾಗುತ್ತಿದೆ.
ಈ ನಿಟ್ಟಿನಲ್ಲಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಿರ್ವಹಿಸಿ ಸಕಾಲದಲ್ಲಿ ಪೂರ್ಣಗೊಳಿಸುವಂತೆ ಹಾಗೂ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಗುತ್ತಿಗೆದಾರರಿಗೆ ಮಹಾನಗರಪಾಲಿಕೆ ಆಯುಕ್ತರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ,
ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಲು ನಿಯೋಜಿಸಿದ ಸಿಬ್ಬಂದಿಗಳಿಗೆ ಮತ್ತು ಗುತ್ತಿಗೆದಾರರಿಗೆ ಕರೆ ಮಾಡುವ ಅಥವಾ ವಾಟ್ಸಪ್ ಮೂಲಕ ದಿನದ 24 ಗಂಟೆಗಳ ಕಾಲವೂ ದೂರುಗಳನ್ನು ಸಲ್ಲಿಸಬಹುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುತ್ತಿಗೆದಾರರು: ಸಯ್ಯದ್ ಅಫೀಜ್-6364216673: ವಾರ್ಡ್ 1 – ಸುರತ್ಕಲ್ ಪಶ್ಚಿಮ; 2 – ಸುರತ್ಕಲ್ ಪೂರ್ವ, 3 –ಕಾಟಿಪಳ್ಳ ಪೂರ್ವ; 04 – ಕಾಟಿಪಳ್ಳ ಕೃಷ್ಣಾಪುರ; 05 – ಕಾಟಿಪಳ್ಳ ಉತ್ತರ; 06 – ಇಡ್ಯಾ ಪೂರ್ವ; 07 – ಇಡ್ಯಾ ಪಶ್ಚಿಮ; 08 –ಹೊಸಬೆಟ್ಟು; 09 – ಕುಳಾಯಿ; 10-ಬೈಕಂಪಾಡಿ; 21 – ಪದವು ಪಶ್ಚಿಮ; 24 – ದೇರೆಬೈಲ್ ದಕ್ಷಿಣ; 25 –ದೇರೆಬೈಲ್ ಪಶ್ಚಿಮ; 26 – ದೇರೆಬೈಲ್ ನೈರುತ್ಯ; 27 –ಬೋಳೂರು; 28 – ಮಣ್ಣಗುಡ್ಡ; 29 – ಕಂಭ್ಳ; 30 –ಕೊಡಿಯಾಲ್‍ಬೈಲ್; 51 – ಅಳಪೆ ಉತ್ತರ; 52 – ಕಣ್ಣೂರು; 53– ಬಜಾಲ್; 54 – ಜಪ್ಪಿನಮೊಗರು; 55- ಅತ್ತಾವರ; 56 –ಮಂಗಳಾದೇವಿ; 57 – ಹೊಯಿಗೆಬಜಾರ್; 58 – ಬೋಳಾರ; 59– ಜಪ್ಪು; 60 – ಬೆಂಗ್ರೆ.
ಗುತ್ತಿಗೆದಾರರು: ನವೀದ್-6364020404: ವಾರ್ಡ್ 11 – ಪಣಂಬೂರು ಬೆಂಗ್ರೆ; 15- ಕುಂಜತ್ತಬೈಲ್ ದಕ್ಷಿಣ; 18 –ಕಾವೂರು; 41 – ಸೆಂಟ್ರಲ್ ಮಾರ್ಕೇಟ್; 42 –ಡೊಂಗರಕೇರಿ; 43 – ಕುದ್ರೋಳಿ; 44 – ಬಂದರ್; 45 –ಪೆÇೀರ್ಟ್; 46 – ಕಂಟೋನ್‍ಮೆಂಟ್; 47 – ಮಿಲಾಗ್ರಿಸ್; 48 –ವೆಲೆನ್ಸಿಯಾ; 49 – ಕಂಕನಾಡಿ; 50 – ಅಳಪೆ ದಕ್ಷಿಣ
ಗುತ್ತಿಗೆದಾರರು: ಶಕೀರ್-7483311597: ವಾರ್ಡ್ 12 – ಪಂಜಿಮೊಗರು; 13 – ಕುಂಜತ್ತಬೈಲ್ ಉತ್ತರ; 14 –ಮರಕಡ; 16 – ಬಂಗ್ರಕೂಳೂರು; 17 – ದೇರೆಬೈಲ್ ಉತ್ತರ; 19– ಪಚ್ಚನಾಡಿ; 20 – ತಿರುವೈಲ್; 22 – ಕದರಿ ಪದವು; 23 –ದೇರೆಬೈಲ್;
ಗುತ್ತಿಗೆದಾರರು: ಎಂ ಜಿ ಹುಸೈನ್-9845108466: ವಾರ್ಡ್ 31 – ಬಿಜೈ; 32 – ಕದ್ರಿ ಉತ್ತರ; 33 – ಕದ್ರಿ ದಕ್ಷಿಣ; 34 –ಶಿವಭಾಗ್; 35 – ಪದವು ಸೆಂಟ್ರಲ್; 36 – ಪದವು ಪೂರ್ವ; 37– ಮರೋಳಿ, 38 – ಬೆಂದೂರು, 39 – ಫಳ್ನೀರ್; 40 – ಕೋರ್ಟ್