Visitors have accessed this post 338 times.
ಕುಂದಗೋಳ: ರಜೆಯ ಹಣ ಮಂಜೂರಾತಿಗೆ ಲಂಚದ ಬೇಡಿಕೆಯಿಟ್ಟಿದ್ದ ಮಹಿಳಾ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ನಡೆದಿದೆ.
ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದ ನಿವೃತ್ತ ಮುಖ್ಯಾಧ್ಯಾಪಕ ಮಂಜುನಾಥ ಕುರುವಿನಶೆಟ್ಟಿ ಎಂಬುವವರ ಜಿಐಎಸ್ ಮತ್ತು ಗಳಿಕೆ ಹಣ ಮಂಜೂರಾತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ಕುಂದರಗಿ ಅವರು ಹತ್ತು ಸಾವಿರ ರೂಪಾಯಿಗೆ ಬೇಡಿಕೆಯಿಟ್ಟು, ಎಂಟು ಸಾವಿರ ರೂಪಾಯಿ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸತೀಶ್ ಚಿಟಗುಪ್ಪಿ ಮಾರ್ಗದರ್ಶನದಲ್ಲಿ ಡಿಎಸ್ಪಿ ಶಂಕರ ರಾಗಿ, ಇನ್ಸಪೆಕ್ಟರ್ ಬಸವರಾಜ ಮೂಕರ್ತಿಹಾಳ, ತೇಜಸ್ವಿನಿ ಸೊಪ್ಪಿ, ಕಾರ್ತಿಕ ಹುಯಿಲಗೋಳ, ಬಿ.ಎಸ್.ದೇಸಾಯಿಗೌಡರ, ಪರಪ್ಪ ಯಲ್ಲಟ್ಟಿ, ರಮೇಶ ಪೂಜಾರ, ಎಂ.ಎಂ.ಗಾಳಿ, ಸಂತೋಷ ಲಕ್ಕಮ್ಮನವರ, ಮಂಜುನಾಥ ಶಿವನಾಯ್ಕ ದಾಳಿಯಲ್ಲಿದ್ದರು.