ಪ್ರಕರಣದ ಫಿರ್ಯಾಧಿದಾರರಾದ ಕಾವಳಪಡೂರು ಗ್ರಾಮ ಬಂಟ್ವಾಳ ನಿವಾಸಿ ಮಹಮ್ಮದ್ ಫಝೀಮ್ (31)ರವರ ದೂರಿನಂತೆ, ಸದ್ರಿಯವರು ದಿನಾಂಕ: 07.12.2023 ರಂದು ಬೆಳಿಗ್ಗೆ ಬಂಟ್ವಾಳ ತಾಲೂಕು, ಕಾವಳಮುಡೂರು ಗ್ರಾಮದ, ಕಾವಳಕಟ್ಟೆ ಸೊಸೈಟಿಯ ಬಳಿಯಿರುವಾಗ ಆರೋಪಿ ಮಹಮ್ಮದ್ ಶಮೀಮ್ ಎಂಬಾತನು ಫಿರ್ಯಾಧಿದಾರರಲ್ಲಿ H E ಹನೀಫ್ ಎಂಬವರ ವಿಚಾರದಲ್ಲಿ ತಕರಾರು ತೆಗೆದು ಅವ್ಯಾಚವಾಗಿ ಬೈದು, ಆತನ ಕೈಯಲ್ಲಿದ್ದ ಚೂರಿಯಿಂದ ಫಿರ್ಯಾಧಿದಾರರ ತೋಳಿಗೆ ಇರಿದು ರಕ್ತಗಾಯಗೊಳಿಸಿರುತ್ತಾನೆ. ಆ ಸಮಯ ಸ್ಥಳದಲ್ಲಿದ್ದ ಇತರ ಆರೋಪಿಗಳಾದ ಫಯಾಜ್, ಶರೀಫ್, ಹನೀಫ್ , ಗಣಿ, HE ಹನೀಫ್, ಝುಬೈರ್, ರಿಶಾನ್ ಎಂಬವರುಗಳು ಸೇರಿ ಹಲ್ಲೆ ನಡೆಸಿರುತ್ತಾರೆ. ಫಿರ್ಯಾಧಿದಾರರು ನೋವಿನಿಂದ ಜೋರಾಗಿ ಬೊಬ್ಬೆ ಹೊಡೆದಾಗ ಇತರರು ಅಲ್ಲಿ ಬರುವುದನ್ನು ನೋಡಿದ ಆರೋಪಿಗಳು ಮುಂದಕ್ಕೆ ನಮ್ಮ ವಿಚಾರಕ್ಕೆ ಬಂದರೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಆರೋಪಿಗಳಿಂದ ಹಲ್ಲೆಗೊಳಗಾಗಿ ಗಾಯಗೊಂಡ ಫಿರ್ಯಾಧಿದಾರರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ: 110/2023, ಕಲಂ: 143, 147, 148, 323, 324, 504, 506, ಜೊತೆಗೆ 149 ಭಾದಂಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.