October 13, 2025
WhatsApp Image 2023-12-09 at 1.17.43 PM

ಪುತ್ತೂರು: ಇಲ್ಲಿನ ಒಳಮೊಗ್ರು ಕುಂಬ್ರದಲ್ಲಿನ ಅರ್ತ್ ಮೂವರ್ ಸಂಸ್ಥೆಯೊಂದರಲ್ಲಿ ಟಿಪ್ಪರ್ ಚಾಲಕನಾಗಿ ದುಡಿಯುತ್ತಿದ್ದ, ಬಾಗಲಕೋಟೆಯ ಬಾದಾಮಿಯ ಯುವಕನೊಬ್ಬ ನಾಪತ್ತೆ ಪ್ರಕರಣ ಆತನ ಕೊಲೆಯಲ್ಲಿ ಅಂತ್ಯ ಕಂಡಿದ್ದು, ಘಟನೆಗೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಿವಾಸಿ ಹನುಮಂತಪ್ಪ (22) ಕೊಲೆಯಾದ ಯುವಕ. ಬಂಧಿತ ಆರೋಪಿಗಳು ಹನುಮಂತಪ್ಪನನ್ನು ದಾರಿ ಮಧ್ಯೆ ಕೊಲೆಗೈದು ಮೃತದೇಹವನ್ನು ಆಗುಂಬೆ ಘಾಟಿಯಲ್ಲಿ ಎಸೆದಿರುವ ಬಗ್ಗೆ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳಲ್ಲಿ ಒಬ್ಬನಾದ ಶಿವಪ್ಪ ಎಂಬಾತನ ಪತ್ನಿಯೊಂದಿಗೆ ಕೊಲೆಯಾದ ಹನುಮಂತಪ್ಪ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿಬಂದಿದ್ದು, ಇದೇ ಕಾರಣ ಹತ್ಯೆಯಾಗಿದೆ ಎಂದು ಹೇಳಲಾಗಿದೆ.

ಒಳಮೊಗ್ರು ಗ್ರಾಮದ ಕುಂಬ್ರ ಎಂಬಲ್ಲಿ ತನ್ನ ಸ್ನೇಹಿತನ ರೂಮಿನಲ್ಲಿ ವಾಸ್ತವ್ಯವಿದ್ದ ಹನುಮಂತ ಅವರನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಿವಾಸಿಗಳಾದ ಶಿವಪ್ಪ ಹನುಮಪ್ಪ ಮಾದರ, ಮಂಜುನಾಥ ಹನುಮಪ್ಪ ಮಾದರ ಮತ್ತು ದುರ್ಗಪ್ಪ ಮಾದರ ಎಂಬವರು ಕಳೆದ ನ. 17ರಂದು ಸಂಜೆ ಮಹೇಂದ್ರ ಮ್ಯಾಕ್ಸಿಂ ವಾಹನವೊಂದರಲ್ಲಿ ಅಪರಿಸಿಕೊಂಡು ಹೋಗಿ ಕೊಲೆ ಮಾಡಿರುವುದಾಗಿ ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.

ಘಟನೆಯ ಕುರಿತು ಮೃತನ ತಾಯಿ ರೇಣವ್ವ ಮಾದರ ಅವರು ನೀಡಿದ್ದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ಆರಂಭಿಸಿದ್ದ ಪ್ರಭಾರ ಸರ್ಕಲ್ ಇನ್‌ಸ್ಪೆಕ್ಟರ್ ರವಿ ಬಿ ಎಸ್ ಅವರ ನೇತೃತ್ವದ ಪೊಲೀಸ್ ತಂಡ ಹನುಮಂತ ಅವರನ್ನು ಅಪಹರಿಸಿದ್ದ ಆರೋಪಿಗಳನ್ನು ಪತ್ತೆ ಮಾಡಿ, ವಿಚಾರಣೆಗೊಳಪಡಿಸಿದ ವೇಳೆ ಕೊಲೆ ಮಾಡಿರುವ ವಿಚಾರವನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಹನುಮಂತ ಅವರ ತಾಯಿ ರೇಣವ್ವ ಮಾದರ ಅವರು ನ. 20ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಂತೆ ಕೇಸು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

About The Author

Leave a Reply