ಕಾರು ಮತ್ತು ಬಸ್ ನಡುವೆ ಅಪಘಾತ: ಹಲವರ ಸ್ಥಿತಿ ಗಂಭೀರ

ಶೃಂಗೇರಿಯಿಂದ ಮಂಗಳೂರು ಕಡೆ ತೆರಳುವ ಖಾಸಗಿ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ನಡೆದ ಪರಿಣಾಮ ಹಲವು ಮಂದಿ ಗಂಭೀರ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನದ ವೇಳೆ ಕಾರ್ಕಳ ಮಾಳ ಘಾಟ್ ನಲ್ಲಿ ನಡೆದಿದೆ.

ಶೃಂಗೇರಿಯಿಂದ ಕಾರ್ಕಳ ಮಾರ್ಗವಾಗಿ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ ಹಾಗೂ ಉಡುಪಿಯಿಂದ ಶೃಂಗೇರಿ ಕಡೆಗೆ ಹೋಗುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ.

ಗಂಭೀರ ಗಾಯಗೊಂಡವರು ಸಂಗಮೇಶ್‌ (55) , ಸುವರ್ಣ( 45), ಸಾಕ್ಷಿ(20) ಸಾವನ್‌(25),ರಾಘವೇಂದ್ರ (32 ) ಎಂದು ತಿಳಿದು ಬಂದಿದೆ.

Leave a Reply