Visitors have accessed this post 1507 times.
ಮಂಗಳೂರು: ಕುಖ್ಯಾತ ಟಾರ್ಗೆಟ್ ಗ್ಯಾಂಗ್‌ನ ನಾಯಕ ಟಾರ್ಗೆಟ್ ಇಲಿಯಾಸ್ ಜ.18 2018 ರಂದು ಮನೆಯಲ್ಲಿ ಹತ್ಯೆಯಾಗಿದ್ದರು. ಈ ಬಗ್ಗೆ ಪಾಂಡೇಶ್ವರ ರಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ತೀರ್ಪು ಹೊರಬಿದ್ದಿದ್ದು 5 ಆರೋಪಿಗಳನ್ನು ನಿರ್ದೋಷಿಗಳು ಎಂದು ಮಂಗಳೂರು ಮೂರನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶೆ ಸಂಧ್ಯಾ ತೀರ್ಪು ನೀಡಿದ್ದಾರೆ.
ಈ ಕೊಲೆಯಾಗುವ ವೇಳೆ ಮೊಹಮ್ಮದ್ ಇಲಿಯಾಸ್ ಮಂಗಳೂರು ಯೂತ್ ಕಾಂಗ್ರೇಸ್‌ನ ವಿಧಾನಸಭಾಕ್ಷೇತ್ರದ ಉಪಾಧ್ಯಕ್ಷರಾಗಿದ್ದರು ಹಾಗೂ ಯು.ಟಿ ಖಾದರ್ ಅವರ ಅಪ್ತರಾಗಿದ್ದರು. ಇಲ್ಯಾಸ್ ಮನೆಗೆ ನುಗ್ಗಿ ದಾವೂದ್ ಮೊಹಮ್ಮದ್ ಮತ್ತು ಶಮೀರ್ ಕೊಲೆ ಮಾಡಿರುವುದಾಗಿ ಇದನ್ನು ಇಲ್ಯಾಸ್‌ನ ಅತ್ತೆ ಅಸ್ಮತ್, ಮೈದುನ ಕೊಲೆ ಮಾಡಿರುವುದನ್ನು ಕಣ್ಣಾರೆ ನೋಡಿರುವುದಾಗಿ ಸಾಕ್ಷಿ ನೀಡಿದ್ದಾರೆ.
ಆರೋಪಿಗಳ ಪರ ಹಾಜರಾದ ಕ್ರಿಮಿನಲ್ ವಕೀಲರಾದ ಜಿನೇಂದ್ರೆ ಕುಮಾರ್ ದಾವೂದ್ ಮತ್ತು ಶಮೀರ್‌ರನ್ನು ಸುಳ್ಳಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಹಾಗಾಗಿಯೇ ಆಸ್ಪತ್ರೆಯಲ್ಲಿ ದಾಖಲು ಮಾಡುವಾಗ ಕೊಂದವರು ಯಾರೆಂದು ತಿಳಿದಿಲ್ಲ ಎಂದು ದಾಖಲಿಸಿದ್ದರು ಎಂದು ವಾದ ಮಂಡಿಸಿದ್ದರು.
ಪೊಲೀಸ್ ಇಲಾಖೆ ಯಲ್ಲಿ ಕೂತೂಹಲ ಮೂಡಿಸಿದ ಈ ಪ್ರಕರಣದಲ್ಲಿ ತೀರ್ಪು ಹೊರಬಿದ್ದಿದ್ದು, ಆರೋಪಿಗಳನ್ನು ನಿರ್ದೋಷಿಗಳು ಎಂದು ಮಂಗಳೂರು ಮೂರನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯದೀಶೆ ಸಂಧ್ಯಾ ತೀರ್ಪು ನೀಡಿದ್ದಾರೆ.