‘ಬುರ್ಖಾ ತೆಗೆದು ಒಳಗೆ ಬನ್ನಿ’ : ಸರ್ಕಾರಿ ಆಸ್ಪತ್ರೆಯಲ್ಲಿನ ‘ಫೋಟೋ ವೈರಲ್’

ಪುತ್ತೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಳವಡಿಸಿದ್ದ ‘ಬುರ್ಖಾ ತೆಗೆದು ಒಳಗೆ ಬನ್ನಿ’ ಎಂಬ ಸೂಚನಾ ಫಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.

ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಪ್ರವೇಶದಲ್ಲಿ ‘ಬುರ್ಖಾ ತೆಗೆದು ಒಳಗೆ ಬನ್ನಿ’ ಎಂಬ ನಾಮ ಫಲಕ ಅಳವಡಿಸಲಾಗಿತ್ತು, ವಿವಾದದ ಬಳಿಕ ಈಗ ಅದನ್ನು ತೆಗೆದು ಹಾಕಲಾಗಿದೆ ಅಂಥ ತಿಳಿದು ಬಂದಿದೆ.

ಇಸಿಜಿ ಹಾಗೂ ತುರ್ತು ಚಿಕಿತ್ಸಾ ಕೊಠಡಿಯಲ್ಲಿ ರೋಗಿಗಳ ಶುಶೂಷೆಗೆ ಪೂರಕವಾಗುವಂತೆ ಈ ನಾಮಪಲಕವನ್ನು ಹಾಕಲಾಗಿತ್ತು ಅಂತ ತಿಳಿದು ಬಂದಿದೆ. ಇಸಿಜಿಗೆ ತೆರಳುವಾಗ ಬುರ್ಖಾ ತೆಗೆದೇ ಹೋಗಬೇಕಾಗುತ್ತದೆ. ಬುರ್ಖಾ ತೆಗೆಯದೇ ಇದ್ದಲ್ಲಿ ಚಿಕಿತ್ಸೆ ನೀಡುವುದು ಹೇಗೆ? ಅಂತ ಹಲವು ಮಂದಿ ಪ್ರಶ್ನೆ ಮಾಡಿದ್ದು, ಯಾವುದೇ ಕೋಮುಭಾವನೆಯಲ್ಲಿ ಹಾಕಿದ ಸೂಚನಾ ಫಲಕವಲ್ಲ ಅಂತ ಹೇಳಲಾಗಿದೆ.

Leave a Reply