ಮ್ಯಾನೇಜರ್ ಸೂಪರ್ವೈಸರ್ ಕಿರುಕುಳ ಆರೋಪ : ಡೆತ್ ನೋಟ್ ಬರೆದಿಟ್ಟು ಕಾರ್ಮಿಕ ನೇಣಿಗೆ ಶರಣು

ಮ್ಯಾನೇಜರ್ ಹಾಗೂ ಸುಪ್ರವೈಸರ್ ಕಿರುಕುಳದಿಂದ ಕಾರ್ಮಿಕನೊಬ್ಬ ಡೆತ್ ನೋಟ್ ಹಾಗೂ ಮೊಬೈಲ್ ವೈಸ್ ರೆಕಾರ್ಡ್ ಮಾಡಿ ಇಟ್ಟು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ದಾಸರಹಳ್ಳಿಯ ಕಾರ್ಮಿಕ ಗೋವಿಂದ (24) ನೇಣಿಗೆ ಶರಣಾಗಿದ್ದಾನೆ.

ಪೀಣ್ಯದ ಕೆಡಿಡಿಎಲ್ ವಾಚ್ ತಯಾರಿಕಾ ಕಂಪನಿಯ ಮ್ಯಾನೇಜರ್ ಗುರುರಾಜ್ ಹಾಗೂ ಸೂಪರ್ವೈಸರ್ ನಂಜಪ್ಪನಿಂದ ಕಾರ್ಮಿಕ ಗೋವಿಂದಗೆ ಕಿರುಕುಳ ನೀಡುತ್ತಿದ್ದರು.

ಗೋವಿಂದ ರಜೆ ಗೆದುಕೊಂಡಿದ್ದಕ್ಕೆ ಅವರು ಕಿರುಕುಳ ನೀಡಿದ್ದರಿಂದ ಹಾಗೂ ಕೆಲಸದಿಂದ ತೆಗೆಯುವುದಾಗಿಯೂ ಕೂಡ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಮೊಬೈಲ್ ವೈಸ್ ರೆಕಾರ್ಡಿಂಗ್ ಹಾಗೂ ಡೆತ್ ನೋಟ್ ಅನ್ನೋ ಬರೆದಿಟ್ಟು ಗೋವಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಳೆದ ಆರು ವರ್ಷದಿಂದ ಪಿಣ್ಯ ಕೆ ಡಿ ಎಲ್ ವಾಚ್ ತಯಾರಿಕೆ ಕಂಪನಿಯಲ್ಲಿ ಗೋವಿಂದ ಕೆಲಸ ಮಾಡುತ್ತಿದ್ದ. ನಿನ್ನೆ ಕೆಲಸ ಮುಗಿಸಿಕೊಂಡು ಬಂದು ಗೋವಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ.ಮ್ಯಾನೇಜರ್ ಗುರುರಾಜ್ ಹಾಗೂ ಸೂಪರ್ವೈಸರ್ ನಂಜಪ್ಪನ್ನನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಕುರಿತಂತೆ ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply