October 29, 2025
WhatsApp Image 2023-12-15 at 7.48.46 PM

ಗುರುಪುರ ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ (ರಿ) ಗುರುಪುರ ಇದರ ಆಶ್ರಯದಲ್ಲಿ ನಡೆಯಲಿರುವ ಗುರುಪುರ ಕಂಬಳ ಉತ್ಸವ ಇದರ ಲೋಗೋ ಬಿಡುಗಡೆ ಸಮಾರಂಭವು ಮಂಗಳೂರಿನ ಬಿಜೈನಲ್ಲಿರುವ ಹೋಟೆಲ್ ಓಷಿಯನ್ ಪರ್ಲ್ ನಲ್ಲಿ ನಡೆಯಿತು.ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಇನಾಯತ್ ಆಲಿ ಬಿಡುಗಡೆಗೊಳಿಸಿದರು.ತದ ಬಳಿಕ ಮಾತನಾಡಿದ ಅವರು,
ಕಂಬಳದ ಮೂಲಕ ತುಳುನಾಡಿನ ಸಂಸ್ಕೃತಿ ಎಲ್ಲಡೆ ಪಸರಿಸಲಿ ಎಂದು ಶುಭಾಹಾರೈಸಿದರು.

ಸುರೇಂದ್ರ ಕಂಬಳಿ ಮಾತನಾಡಿ, ತುಳು ನಾಡಿನ ಸಾಂಪ್ರದಾಯಿಕ ಆಚರಣೆಯ ಸಂಕೇತವಾಗಿ ಬಂದ ಕಂಬಳದ ಮೂಲಕ ಇನ್ನಷ್ಟು ವಿಸ್ತರಣೆಯಾಗಲಿ ಎಂದರು.

ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ (ರಿ) ಗುರುಪುರ ಇದರ ಅಧ್ಯಕ್ಷ ರಾಜ್ ಕುಮಾರ್  ಶೆಟ್ಟಿ ತಿರುವೈಲ್ ಗುತ್ತು ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದ್ರು.

ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ , ಅಂತರಾಷ್ಟ್ರೀಯ ಕಾರ್ ರೇಸ್ ಪಟು ಅಶ್ವಿನಿ ನಾಯ್ಕ್ , ಉಮೇಶ್ ರೈ ಪದವು ಮೇಗಿನ ಮನೆ,ಮಾಜಿ ಜಿ.ಪಂ ಸದಸ್ಯ ಯು.ಪಿ.ಇಬ್ರಾಹಿಂ,ಗಡಿಕಾರ ಪ್ರಮೋದ್ ರೈ ,
ಕರಾವಳಿ ಜೋಡುಕರೆ ಕಂಬಳ ಗುರುಪುರ ಸದಸ್ಯರಾದ ಹರೀಶ್ ಭಂಡಾರಿ, ವಿನಯ ಕುಮಾರ್ ಶೆಟ್ಟಿ, ಯಶವಂತ ಶೆಟ್ಟಿ, ಪುರುಷೋತ್ತಮ,ಜಗದೀಶ್ ಆಳ್ವ ಗಿರೀಶ್ ಆಳ್ವ,ಸುನಿಲ್ ಗಂಜಿಮಠ, ಸುಧಾಕರ, ಗುರುಪುರ ಗ್ರಾಮ ಪಂಚಾಯತ್ ಸದಸ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿಜೇತ್ ಶೆಟ್ಟಿ ನಡೆಸಿಕೊಟ್ಟರು.

About The Author

Leave a Reply