August 30, 2025
WhatsApp Image 2023-12-15 at 9.13.01 PM

ಸಮಹಾದಿ: ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ವಾರ್ಷಿಕ ಮಹಾಸಭೆಯು ಬೈತಡ್ಕ ಜುಮ್ಮಾ ಮಸ್ಜಿದ್ ಇದರ ಅಧ್ಯಕ್ಷರಾದ ಬಿ.ಪಿ‌‌ ಇಸ್ಮಾಯಿಲ್ ಹಾಜಿ ರವರ ಅಧ್ಯಕ್ಷತೆಯಲ್ಲಿ ನುಸ್ರತುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ಜುಮಾ ನಮಾಝ್ ನ ಬಳಿಕ ನಡೆಯಿತು.

ಖತೀಬ್ ಉಸ್ತಾದರಾದ ರಫೀಕ್ ನಿಝಾಮಿ ಉಸ್ತಾದ್ ರ ದುವಾಃ ಮಾಡಿ ಉಧ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರ.ಕಾರ್ಯದರ್ಶಿ ಫಲುಲ್ ರಾಗಿಪೇಟೆ ಒಂದು ವರ್ಷದ ವರದಿ ಮಂಡಿಸಿದರು

ನಂತರ ಹೊಸ ಸಮಿತಿ ಆಯ್ಕೆ ಮಾಡುವ ಬಗ್ಗೆ ಚರ್ಚೆ ‌ನಡೆದು ಅಂತಿಮವಾಗಿ ಹಳೆ ಸಮಿತಿಯ ಸದಸ್ಯರಾದ ಅಧ್ಯಕ್ಷ ಸಾದಿಕ್ ಸಮಹಾದಿ,ಉಪಾಧ್ಯಕ್ಷ ಆದಂ,ಪ್ರ.ಕಾರ್ಯದರ್ಶಿ ಫಲುಲ್ ರಾಗಿಪೇಟೆ, ಜೊತೆ ಕಾರ್ಯದರ್ಶಿ ಸಿನಾನ್, ಕೋಶಾದಿಕಾರಿ ಉಮ್ಮರ್ ಫಾರೂಕ್, ಸಮಿತಿ ಸದಸ್ಯರಾಗಿ ಪಿ.ಎಂ ಅಬ್ದುಲ್ ರಹಿಮಾನ್, ಸಾಬುಕುಂಞಿ ಹುದೇರಿ,ಸೈಫುದ್ದೀನ್, ಮುಸ್ತಫಾ ರವರನ್ನು ಒಂದು ವರ್ಷದ ತನಕ ಮುಂದುವರೆಸುವುದೆಂದು ಹಾಗೂ ಹೊಸ ಸಮಿತಿಗೆ ಇಬ್ಬರು ಹೊಸ ಸದಸ್ಯರಾಗಿ ಸಿದ್ದೀಕ್ ಅಲೆಕ್ಕಾಡಿ ಹಾಗೂ ಮಾಮು ಸಮಹಾದಿ ರವರನ್ನು ಸೇರಿಸುವುದೆಂದು ತೀರ್ಮಾನಿಸಿ ಅನುಮೋದಿಸಲಾಯಿತು.

ನಂತರ ಬೈತಡ್ಕ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಬಿ.ಪಿ ಇಸ್ಮಾಯಿಲ್ ಹಾಜಿ ರವರು ಅಧ್ಯಕ್ಷೀಯ ಭಾಷಣ ಮಾಡಿ ಸಲಹೆ ಸೂಚನೆಗಳನ್ನು ನೀಡಿ ಸಮಿತಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ನುಸ್ರತುಲ್ ಇಸ್ಲಾಂ ಮದ್ರಸ ಸಮಹಾದಿ ಇದರ ಮಾಜಿ ಅಧ್ಯಕ್ಷರಾದ ಉಸ್ಮಾನ್ ಹಾಜಿ ತಿಂಗಳಾಡಿ,ಹಸನ್ ಕುಂಞಿ ಸಮಹಾದಿ, ಮಹಮ್ಮದ್ ಅಲೆಕ್ಕಾಡಿ,
ಬೈತಡ್ಕ ಕೇಂದ್ರ ಮಸೀದಿಯ ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ ದಫ್,ಕೋಶಾಧಿಕಾರಿ ಇಕ್ಬಾಲ್ ಪಿ.ಬಿ, ಕಾರ್ಯದರ್ಶಿಗಳಾದ ಶರೀಫ್,ಅಬ್ದುಲ್ಲಾ, ಶಾಫಿ,ಹಾಗೂ ಫೈಝಲ್ ರವರು ಸೇರಿದಂತೆ ಜಮಾಅತ್ ಸದಸ್ಯರೆಲ್ಲರೂ ಸಭೆಯಲ್ಲಿ ಪಾಲ್ಗೊಂಡಿದ್ದರು.

About The Author

Leave a Reply