Visitors have accessed this post 1318 times.
ಬರಕ ಇಂಟರ್ನ್ಯಾಷನಲ್ ಸ್ಕೂಲ್ & ಕಾಲೇಜಿನಲ್ಲಿ ಬರಕ ಎಕ್ಸ್ ಪ್ಲೋರಿಯ 2023ಕ್ಕೆ ಇಂದು ಕರ್ನಾಟಕ ಘನ ಸರಕಾರದ ಮಾಜಿ ಸಚಿವರಾದ ಶ್ರೀ. ಬಿ.ರಮನಾಥ ರೈ ಚಾಲನೆ ನೀಡಿದರು.
ಮಂಗಳೂರು ಹೊರವಲಯದ ಅಡ್ಯಾರ್ ಎಂಬಲ್ಲಿರುವ ಬರಕ ಇಂಟರ್ನ್ಯಾಷನಲ್ ಸ್ಕೂಲ್ & ಕಾಲೇಜು ಒಂದೇ ಸೂರಿನಡಿ ಕೆ.ಜಿ.ಸೆಕ್ಷನ್ ನಿಂದ ಹಿಡಿದು ಪದವಿ,ವೃತ್ತಿಪರ ಕೊರ್ಸ್ ಗಳೊಂದಿಗೆ ಗುಣಮಟ್ಟದ ದಾರ್ಮಿಕ ಶಿಕ್ಷಣದ ಕೇಂದ್ರವಾಗಿದೆ.ಇಂದು ಬರಕ ಕ್ಯಾಂಪಸ್ ನಲ್ಲಿ ನಡೆದ Xporia ಬಹಳ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಯಿತು.ಕೆ.ಜಿ.ಸೆಕ್ಷನ್ ನಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳು ಈ Xploriaದಲ್ಲಿ ಭಾಗವಹಿಸಿ ತಾವು ಮಾಡಿದ ವಿಜ್ಞಾನ ಮಾದರಿಗಳು,ಲೌಕಿಕ ಜ್ಞಾನ, ದಾರ್ಮಿಕವಾದ ಚಿತ್ರವಿಶೇಷತೆಗಳಿಂದ ಕೂಡಿದ ಎಲ್ಲವನ್ನು ಕ್ಲಾಸ್ ರೂಪಗಳಲ್ಲಿ ನೋಡುಗರಿಗೆ ಶಾಲಾ ಮಕ್ಕಳು ಸಂಪೂರ್ಣವಾಗಿ ವಿವರಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನೋಡುಗರನ್ನು ಗಮನಸೆಳೆದರು.ಮಾಜಿ ಸಚಿವರಾದ ರಮನಾಥ ರೈ ಅವರು ಗಣ್ಯರೊಂದಿಗೆ ಎಲ್ಲಾ ಅಂತಸ್ತುಗಳಿಗೂ ಭೇಟಿ ನೀಡಿ ಮಕ್ಕಳ ವಸ್ತು ಪ್ರದರ್ಶನಗಳನ್ನು ವೀಕ್ಷಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಮಕ್ಕಳಲ್ಲದೆ ಎಲ್ಲಾ ವಯೋಮಾನದವರಿಗೆ ಮೆದುಳಿಗೆ ಶಕ್ತಿ ನೀಡುವ ಕುತೂಹಲಕಾರಿ ವಿನೋದಾವಳಿ ಆಟಗಳು,ಹಿಂದಿ ಮೇಳ,ಆಯುಷ್ ಸಹಲ,ಕುರಾನ್ ನೊಂದಿಗೆ ವಿಜ್ಞಾನ, ಸೀರತ್ ನಬಿ,ಹಿಜ್ಮಾ,ಕನ್ನಡ ಕಲರವ,ಪ್ರತಿಭಾ ವೇದಿಕೆ,ಕ್ವಿಝ್,5D ಶೋ,ವರ್ಲ್ಡ್ ಎಕ್ಸ್ಪೋ, ಇತ್ಯಾದಿಗಳು ನೋಡುಗರನ್ನು ಮನಸೆಳೆಯುವಂತಿತ್ತು.ಈ ಕಾರ್ಯಕ್ರಮವನ್ನು ಇತರ ಶಾಲೆಗಳ ಮಕ್ಕಳು ನೋಡವ ಅವಕಾಶ ಕಲ್ಪಿಸಲಾಗಿತ್ತು.ಅದರಂತೆ ಹಲವಾರು ಶಾಲೆಗಳ ಮಕ್ಕಳು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಂಡು ಆನಂದಿಸಿದರು.ಎಕ್ಸ್ ಪೋರಿಯದಲ್ಲಿ ಭಾಗವಹಿಸಿದ ಗಣ್ಯರು,ಪೋಷಕರು,ಇತರ ಶಾಲೆಯ ಅದ್ಯಾಪಕರು ಮೆಚ್ಚುಗೆಯ ಅನಿಸಿಕೆ ವ್ಯಕ್ತಪಡಿಸಿ ಇಲ್ಲಿನ ಮ್ಯಾನೇಜ್ಮೆಂಟ್, ಅದ್ಯಾಪಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದರು.ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಚಾಲನೆ ನೀಡಿದ ಮಾಜಿ ಸಚಿವರನ್ನು ಶಾಲುಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬರಕ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜು ಸಮೂಹ ಸಂಸ್ಥೆಗಳ ಅದ್ಯಕ್ಷರಾದ ಮಹಮ್ಮದ್ ಅಶ್ರಪ್ ಕೆಂಜಾರ್,ಉಂಞ ಬ್ಯಾರಿ ಕೆಂಜಾರ್,ಶಾಲೀಮಾರ್ ಬಿಲ್ಡರ್ಸ್ & ಡೆವೆಲಪರ್ಸ್ ಚೇರ್ಮನ್ ಬಶೀರ್ ಆಹ್ಮದ್ ಶಾಲೀಮಾರ್,ದ.ಕನ್ನಡ ಜಿಲ್ಲಾ ಕಾಂಗ್ರೆಸ್ ಮಾಜಿ ಅದ್ಯಕ್ಷರಾದ ಇಬ್ರಾಹಿಂ ಕೋಡಿಜಾಲ್,ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ,ಸುರೇಂದ್ರ ಕಂಬಳಿ,ಆರ್.ಕೆ.ಶಿವರಾಜ್,ಬರಕ ಸ್ಕೂಲ್ ಮತ್ತು ಕಾಲೇಜ್ ಇದರ ಜನರಲ್ ಮ್ಯಾನೇಜರ್ ಶಮೀರ್,ಇಸ್ಲಾಮಿಕ್ ವಿಭಾಗದ HOD ಮಹಮ್ಮದ್ ಹನೀಪ್ ಬೊಳಂತೂರು,ಹಸೈನಾರ್ ತಾಳಿತ್ತನೂಜಿ, ಉಸ್ಮಾನ್ ಬೊಳಂತೂರು ಉಪಸ್ಥಿತರಿದ್ದರು.