ಅಕ್ರಮ ಮರಳು ಸಾಗಾಟ: ಆರು ಮಂದಿಯ ಬಂಧನ..!

ಕಾರ್ಕಳ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‌ಗಳನ್ನು, ಮರಳು ಸಹಿತ ವಶಪಡಿಸಿಕೊಂಡಿರುವ ಕಾರ್ಕಳ ಗ್ರಾಮಾಂತರ ಪೊಲೀಸರು ಆರು ಮಂದಿಯನ್ನು ನಿನ್ನೆ ಬಂಧಿಸಿದ್ದಾರೆ.
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆಯ ಚೆಕ್‌ಪೋಸ್ಟ್‌ನಲ್ಲಿ ನಿನ್ನೆ ತಪಾಸಣೆ ಕರ್ತವ್ಯದಲ್ಲಿದ್ದ ಪೊಲೀಸರು‌, ಐದು ಟಿಪ್ಪರ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ವಾಹನ ಸಮೇತ ವಶಪಡಿಸಿಕೊಂಡಿದ್ದಾರೆ.
ಗದಿಗೆಪ್ಪ (40), ಹಾಲಪ್ಪ (42), ಜಗದೀಶ ಶಣ್ಮುಕಪ್ಪ (32), ಕುಮಾರ್ (35), ಕೃಷ್ಣ (25) ಮತ್ತು ನೀಲ್ ರೋಶನ್ ಬಂಧಿತರು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply