Visitors have accessed this post 758 times.
ಕಾರವಾರ : ಈಜಲು ಹೋದ ಒಂದೇ ಕುಟುಂಬದ ಐವರು ನೀರುಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಲಿಂಗ ಬಳಿಯ ಭೂತದಗುಂಡಿಯಲ್ಲಿ ನಡೆದಿದೆ.
ನೀರು ಪಾಲಾದವರನ್ನು ರಾಮನಬೈಲಿನ ನಿವಾಸಿಗಳಾದ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ನಾದಿಯಾ ನೂರ್ (20), ನಬಿಲ್ ನೂರ್ ಅಹ್ಮದ್(22), ವಿದ್ಯಾರ್ಥಿಗಳಾದ ಉಮರ್ ಸಿದ್ದಿಕ್(14), ಮಿಸ್ಬಾ ತಬಸುಮ್(21) ಎಂದು ಗುರುತಿಸಲಾಗಿದೆ.
ಮಗುವೊಂದು ಆಡುವಾಗ ನದಿಗೆ ಬಿದ್ದಿದ್ದು ಮಗು ರಕ್ಷಣೆಗಾಗಿ ಸಲೀಮ್ ಕಲೀಲ್ ನದಿಗೆ ಧುಮುಕಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಗು ರಕ್ಷಣೆಗೆ ಉಳಿದವರೂ ನದಿಗೆ ಇಳಿದಿದ್ದು, ಈ ಸಂದರ್ಭದಲ್ಲಿ ಮಗು ರಕ್ಷಣೆ ಮಾಡಿದ ಸಲೀಮ್ ಉಳಿದವರನ್ನು ಸಹ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ನೀರಿಗಿಳಿದ ಎಲ್ಲರೂ ಮುಳುಗಿ ಸಾವು ಕಂಡಿದ್ದಾರೆ ಸದ್ಯ ಓರ್ವನ ಮೃತ ದೇಹ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಉಳಿದವರಿಗಾಗಿ ಅಗ್ನಿಶಾಮಕ ಸಿಬ್ಬಂದಿಗಳಿಂದ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದಾರೆ.
Post Views: 790