Visitors have accessed this post 842 times.

ಸೌಹಾರ್ದತೆಗೆ ಸಾಕ್ಷಿಯಾದ 2023 ಸೀಝನ್ 7 ಕೊಡಂಗಾಯಿ ಪ್ರೀಮಿಯರ್ ಲೀಗ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ

Visitors have accessed this post 842 times.

ಮೋರ್ನಿಂಗ್ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಕೊಡಂಗಾಯಿ ಇದರ ಆಶ್ರಯದಲ್ಲಿ ಆಹ್ವಾನಿತ ತಂಡಗಳ ನಿಗದಿತ ಓವರಿನ KPL-2023 ಸೀಝನ್ -7 ಅಂಡರ್ ಆರ್ಮ್ ಕ್ರಿಕೆಟ್ ಕ್ರೀಡಕೂಟ ಕೊಡಂಗಾಯಿ ಜಂಕ್ಷನ್ ಸಮೀಪವಿರುವ ವಿಠ್ಠಲ್ ಶೆಟ್ಟಿ ಅವರ ಮೈದಾನದಲ್ಲಿ ನಡೆಯಿತು. ಮೋರ್ನಿಂಗ್ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬಿನವರು ಕ್ರೀಡೆಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಈಗಾಗಲೇ ಜನಮಣ್ಣನೆಗಳಿಸಿಕೊಂಡಿದ್ದಾರೆ. ಅಲ್ಲದೇ ಇಂದು ನಡೆದ ಕ್ರೀಡಾಕೂಟವನ್ನು ಸ್ಥಳೀಯವಾಗಿ ಎಲ್ಲಾ ವರ್ಗದವರನ್ನು ಒಂದೇ ಕಡೆ ಸೇರಿಸಿ ಬಿಡ್ಡಿಂಗ್ ಮೂಲಕ ತಂಡವನ್ನು ಮಾಲಕತ್ವದ ಮೂಲಕ ಸಂಘಟಿಸಿರುವುದು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸರ್ವಧರ್ಮೀಯ ಯುವಕರು ಬಾಗವಹಿಸಿದ ಈ ಕ್ರೀಡಾಕೂಟವೂ ಸರ್ವಜನಾಂಗದ ಶಾಂತಿಯ ತೋಟವಾಗಿ ಯಶಸ್ವಿಯೊಂದಿಗೆ ಮುಕ್ತಾಯಗೊಂಡಿತು. ಉದ್ಘಾಟನೆಯಿಂದ ಹಿಡಿದು ಸಮಾರೋಪ ಸಮಾರಂಭದವರೆಗೆ ಸ್ಥಳೀಯ ಸರ್ವಧರ್ಮದ ಮುಖಂಡರು ಭಾಗಿಯಾಗಿ ಕ್ರೀಡಾಕೂಟದ ಪಾಲುದಾರರಾದರು.ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳ ಆಟಗಾರರು ಉತ್ತಮ ಸಮವಸ್ತ್ರದೊಂದಿಗೆ ವೃತ್ತಿಪರ ಆಟಗಾರರಂತೆ ಮಿಂಚಿ ನೋಡುಗರ ಗಮನಸೆಳೆಯುವಂತಿತ್ತು.ಉದ್ಘೋಷ ಸಹಿತ ಕ್ರೀಡಾಂಗಣ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಡಸಿ ಅಭಿನಂದನೆಗೆ ಆರ್ಹರಾದರು.

 

ಉದ್ಘಾಟನಾ ಸಮಾರಂಭವನ್ನು ಮೋರ್ನಿಂಗ್ ಸ್ಟಾರ್ ಇದರ ಅದ್ಯಕ್ಷರಾದ ಮಹಮ್ಮದ್ ಪಯಾಝ್ ಕೊಡಂಗಾಯಿ ಅದ್ಯಕ್ಷತೆಯಲ್ಲಿ ಸ್ಥಳೀಯ ವಿಟ್ಲಪಡ್ನೂರು ಗ್ರಾ.ಪಂ ಅದ್ಯಕ್ಷರಾದ ಜಯಂತ.ಪಿ.ಪೂರ್ಲಪ್ಪಾಡಿ,ಗ್ರಾ.ಪಂ. ಸದಸ್ಯರಾದ ನಾಗೇಶ್ ಶೆಟ್ಟಿ ಕೊಡಂಗಾಯಿ,ವಿಠ್ಠಲ ಶೆಟ್ಟಿ ಕಾಪುಕೋಡಿ, ಪರ್ತಿಪ್ಪಾಡಿ ಜುಮಾಮಸೀದಿ ಅದ್ಯಕ್ಷರಾದ ಹಕೀಂ ಪರ್ತಿಪ್ಪಾಡಿ,PWD ಗುತ್ತಿಗೆದಾರರಾದ ಶಾಹುಲ್ ಹಮೀದ್ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.ನಂತರ ನಡೆದ ಲೀಗ್ ಮಾದರಿ ಕ್ರಿಕೆಟ್ ಬಹಳ ಪೈಪೋಟಿಯೊಂದಿಗೆ ನಡೆದು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.ಪೈನಲ್ ಹಂತಕ್ಕೆ ತಲುಪಿದ ಅಝರ್ ಮಾಲಕತ್ವದ ಮನ್ಹಾ ವಾರಿಯರ್ಸ್‌ ಹಾಗೂ ಅನ್ಸು ಮಾಲಕತ್ವದ 4 ಸ್ಕ್ವಾಡ್ ಸೆಣಸಾಟ ನಡೆಸಿ KPL ಪ್ರೀಪಿಯರ್ ಲೀಗ್ ಟ್ರೋಪಿಯನ್ನು ಮನ್ಹಾ ವಾರಿಯರ್ಸ್ ಪಡೆದು ಮುತ್ತಿಟ್ಟುಕೊಂಡಿತ್ತು.

ನಂತರ ನಡೆದ ಪ್ರಶಸ್ತಿ ವಿಜೇತ ಕಾರ್ಯಕ್ರಮದಲ್ಲಿ ಉತ್ತಮ ಬ್ಯಾಟ್ಸ್‌ಮನ್ ಆಗಿ ಮನ್ಹಾ ವಾರಿಯರ್ಸ್‌ ತಂಡದ ಚರಣ್ ಕಾಪುಮಜಲು,ಉತ್ತಮ ಬೌಲರ್ ಆಗಿ ಅದೇ ತಂಡದ ಸೈಪ್, ವ್ಯಾಲ್ಯೂಯೇಬಲ್ ಆಟಗರಾರಗಿ 4 ಸ್ಕ್ವಾಡ್ ತಂಡದ ನಾಸೀರ್ ದೋಹ ಪ್ರಶಸ್ತಿ ಪಡೆದುಕೊಂಡರು. ಸಮಾರಂಭದಲ್ಲಿ ಕ್ರೀಡಾಂಗಣ ಒದಗಿಸಿದ ಕ್ರೀಡಾ ಪ್ರೋತ್ಸಾಹಕರಾದ ವಿಠ್ಠಲ ಶೆಟ್ಟಿ ಕುಟುಂಬದವರನ್ನು ಸ್ಮರಣಿಕೆ ನೀಡಿ ಸಂಘಟಕರ ವತಿಯಿಂದ ಅಭಿನಂದಿಸಲಾಯಿತು. ಕ್ರೀಡಾಕೂಟಕ್ಕೆ ಟ್ರೋಪಿ,ವೈಯಕ್ತಿಕ ಟ್ರೋಪಿಗಳನ್ನು ನೀಡಿ ಸಂಪೂರ್ಣ ಸಹಕಾರ ನೀಡಿದ ಕಮರುದ್ದೀನ್ ಅರಫಾ ಮಸ್ಕತ್ ಅವರನ್ನು ಕೂಡ ಸ್ಮರಿಸಿ ಅಭಿನಂದನೆ ಸಲ್ಲಿಸಲಾಯಿತು.

ಸಮಾರೋಪ ಸಮಾರಂಭದ ಈ ಸಂಧರ್ಭದಲ್ಲಿ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಸದಸ್ಯರೂ ,ವಲಯ ಕಾಂಗ್ರೆಸ್ ಅದ್ಯಕ್ಷರಾದ ಶ್ರೀ. ಬಿ.ಸಂದೇಶ್ ಶೆಟ್ಟಿ ಬಿಕ್ನಾಜೆ, ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ,ಎಂ.ಎಚ್.ಶಾಮೀಯಾನದ ಮಾಲಕರಾದ ಅನೀಶ್ ಕುಡ್ತಮುಗೇರು,ಕಾಂಗ್ರೆಸ್ ಮುಖಂಡರಾದ ಹಸೈನಾರ್ ತಾಳಿತ್ತನೂಜಿ, ರಿಫಾ ಎಂಟರ್ಪ್ರೈಸಸ್ ಇದರ ರಪೀಕ್ ಪರ್ತಿಪ್ಪಾಡಿ, ಸೇರಿ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *