
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬ ಬೀಡಿ ಸೇರಿದ್ದು, ಆರ್.ಐ.ಸಿ.ಯು.ನಲ್ಲಿ ಬೆಂಕಿ ಕಿಡಿ ಹೊತ್ತಿ ಹಾನಿಯಾಗಿದೆ.



ಜಾಮ್ ನಗರದ ಸರ್ಕಾರಿ ಬಿಜಿ ಆಸ್ಪತ್ರೆಯ ಸಿಬ್ಬಂದಿ ಗುರುವಾರ ಬೆಳಗಿನ ಜಾವ ತಗುಲಿದ್ದ ಬೆಂಕಿ, ದಟ್ಟ ಹೊಗೆಯನ್ನು ಸಕಾಲದಲ್ಲಿ ನಂದಿಸುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗೆ ಬೀಡಿ ಸೇದುವ ಚಟ ಬಂದಿದೆ. ಕೃತಕ ಉಸಿರಾಟದ ಆರೈಕೆ ಘಟಕದಲ್ಲಿ ಆಕ್ಸಿಜನ್ ಬೆಂಬಲದಲ್ಲಿದ್ದ ರೋಗಿ ಆಸ್ಪತ್ರೆ ಎನ್ನುವುದನ್ನು ಮರೆತು ಅಲ್ಲೇ ಬಿಡಿ ಸೇದಲು ಮುಂದಾಗಿದ್ದಾನೆ.
ಬೀಡಿಗೆ ಬೆಂಕಿ ಹಚ್ಚುತ್ತಿದ್ದಂತೆ ಕಿಡಿ ಹೊತ್ತಿ ಹೊಗೆ ಆವರಿಸಿದೆ. ಕೂಡಲೇ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ದೀಪಕ್ ತಿವಾರಿ, ರೋಗಿಗೆ ಸಣ್ಣ ಗಾಯವಾಗಿದ್ದು, ಉಳಿದ ಎಲ್ಲಾ ರೋಗಿಗಳು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.