Visitors have accessed this post 497 times.

ಕಾರ್ಕಳ : ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿಗೆ ಶ್ರದ್ಧಾಂಜಲಿ ಪೋಸ್ಟ್ – ದೂರು ದಾಖಲು

Visitors have accessed this post 497 times.

ಕಾರ್ಕಳ : ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್‌ನ್ನು ಹಂಚಿಕೊಂಡಿದ್ದ ಸುಮಂತ್‌ ಬಾಳಿಗ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸುಹಾಶ್‌ ಕಾವ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಹುಲ್ ಗಾಂಧಿಯವರ ಭಾವಚಿತ್ರವನ್ನು ಮರಣ ಹೊಂದಿದ ರೀತಿಯಲ್ಲಿ ಹೂಮಾಲೆ ಹಾಕಿ ಅಗರಬತ್ತಿಯನ್ನು ಹಂಚಿ ಶ್ರದ್ಧಾಂಜಲಿ ಸಲ್ಲಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಮೌಸಮಿ ಅಫಿಷಿಯಲ್ ಎಂಬ ಪೇಜ್‌ನಲ್ಲಿ ಪೋಸ್ಟ್ ಮಾಡಿರುವುದನ್ನು ಸುಮಂತ್ ಬಾಳಿಗ ಶೇರ್ ಮಾಡಿರುತ್ತಾನೆ. ಎರಡು ರಾಜಕೀಯ ಪಕ್ಷದ ಮುಖಂಡರ ಸಮುದಾಯದ ನಡುವೆ ವೈರತ್ವವನ್ನು ಬೆಳಸಿ ದ್ವೇಷ ಭಾವನೆ ಹರಡುವ ಉದ್ದೇಶದಿಂದ ಫೋಟೋವನ್ನು ಷೇರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುತ್ತಾನೆ. ಆದ್ದರಿಂದ ಸುಮಂತ್ ಬಾಳಿಗ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಸುಹಾಸ್‌ ಕಾವ ನೀಡಿರುವ ದೂರಿನಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *