Visitors have accessed this post 822 times.

ಮಂಗಳೂರು: ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳ ಬಂಧನ

Visitors have accessed this post 822 times.

ದಿನಾಂಕ: 22-12-2023 ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಿಕುಳ ವಾಮಂಜೂರು ಎಂಬಲ್ಲಿರುವ ದೂರದರ್ಶನ ಕೇಂದ್ರ ಹಳೆಯ ಕಟ್ಟಡದ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಗುರುಪುರ ಮಠದ ಗುಡ್ಡೆ ನಿವಾಸಿ ನವಾಜ್ ಹಾಗೂ ವಾಮಂಜೂರು ನಿವಾಸಿ ರತಿಕ್ ಎಂಬುವವರನ್ನು ವಶಕ್ಕೆ ಪಡೆದಿದ್ದು, ಆರೋಪಿತರಿಂದ ಸುಮಾರು ಒಟ್ಟು 890 ಗ್ರಾಂ ತೂಕದ ಗಾಂಜ (ಅಂದಾಜು ಮೌಲ್ಯ ರೂಪಾಯಿ 17,800/-) ಮತ್ತು ಯಮಹಾ ಬೈಕ್- KA-19-ED-3847 ಮೋಟಾರ್ ಸೈಕಲ್ (ಅಂದಾಜು ಮೌಲ್ಯ ರೂಪಾಯಿ 50,000/-) ಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಆರೋಪಿತರುಗಳ ಪೈಕಿ ನವಾಜ್ ಎಂಬಾತನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2016 ರಲ್ಲಿ ಒಂದು ಕೊಲೆ ಪ್ರಕರಣ, ಸೆನ್ ಪೊಲೀಸ್ ಠಾಣೆಯಲ್ಲಿ 2021 ರಲ್ಲಿ ಒಂದು ಗಾಂಜಾ ಮಾರಾಟ ಪ್ರಕರಣ ಹಾಗೂ ಬಜ್ಪೆ ಪೊಲೀಸ್ ಠಾಣೆಯಲ್ಲಿ 2023 ರಲ್ಲಿ ಒಂದು ಗಾಂಜಾ ಮಾರಾಟ ಪ್ರಕರಣ ಈತನ ವಿರುದ್ಧ ದಾಖಲಾಗಿರುತ್ತದೆ.

ಪತ್ತೆ ಕಾರ್ಯ:
ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಮಾನ್ಯ ಪೊಲೀಸು ಆಯುಕ್ತರಾದ ಶ್ರೀ ಅನುಪಮ ಅಗ್ರವಾಲ್ IPS ರವರ ನಿರ್ದೇಶನದಂತೆ, ಶ್ರೀ ಸಿದ್ದಾರ್ಥ್ ಗೋಯಲ್ IPS, ಪೊಲೀಸ್ ಉಪ-ಆಯುಕ್ತರು (ಕಾ&ಸು), ಶ್ರೀ ದಿನೇಶ ಕುಮಾರ್, ಪೊಲೀಸ್ ಉಪ-ಆಯುಕ್ತರು (ಅಪರಾಧ & ಸಂಚಾರ) ರವರ ಮಾರ್ಗದರ್ಶನದಂತೆ ಮಂಗಳೂರು ದಕ್ಷಿಣ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ಧನ್ಯಾ ನಾಯಕ್ ರವರ ಮಾರ್ಗದರ್ಶನದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿರುತ್ತಾರೆ.

Leave a Reply

Your email address will not be published. Required fields are marked *