
ಮಂಗಳೂರಿಗೆ ಸೌದಿ ಅರೆಬಿಯಾದಿಂದ ಕಚ್ಚಾ ತೈಲ ಹೊತ್ತು ಬರುತ್ತಿದ್ದ MV Chem Pluto ಹಡಗಿನ ಮೇಲೆ ಶನಿವಾರ ದ್ರೋನ್ ದಾಳಿ ನಡೆದಿದ್ದು ಅದರಲ್ಲಿದ್ದ 20 ಮಂದಿ ಅಪಾಯದಿಂದ ಪಾರಾಗಿರುವುದಾಗಿ ವರದಿಯಾಗಿದೆ.



ಪೂರ್‌ಬಂದರ್ ಕರಾವಳಿಯಿಂದ 217ನಾಟಿಕಲಗ್ ಮೈಲ್ ದೂರದಲ್ಲಿ ದಾಳಿ ನಡೆದಿದ್ದು ಆ ವೇಳೆ ದೊಡ್ಡ ಸ್ಫೋಟದ ಶಬ್ದ ಕೇಳಿಸಿದೆ. ಕೂಡಲೇ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪಡೆ ನೌಕೆ ನೆರವಿಗೆ ಧಾವಿಸಿದೆ. ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ನಂದಿಸಲಾಗಿದೆ. ಆದರೆ ಹಡಗಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗಿರುವುದಾಗಿ ವರದಿಯಾಗಿದೆ.