Visitors have accessed this post 500 times.
ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ದಟ್ಟ ಮಂಜಿನಿಂದಾಗಿ ಕೋಳಿಗಳನ್ನು ಸಾಗಿಸುತ್ತಿದ್ದ ಟ್ರಕ್ ಅಪಘಾತಕ್ಕೀಡಾದಾ ವೇಳೇಉಲ್ಲಿ ಟ್ರಕ್ ನಲ್ಲಿ ಲಕ್ಷಾಂತರ ಮೌಲ್ಯದ ಕೋಳಿಗಳುನ್ನು ಸ್ಥಳೀಯ ಜನತೆ ಕದ್ದು ಕೊಂಡು ಹೋಗಿರುವ ಘಟನೆ ನಡೆದಿದೆ.
ದಟ್ಟ ಮಂಜಿನಿಂದಾಗಿ ಕಡಿಮೆ ಗೋಚರತೆಯಿಂದಾಗಿ ಒಂದು ಡಜನ್ ಗೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಹೆದ್ದಾರಿಯಲ್ಲಿ ವಾಹನಗಳು ಅಪಘಾರಕ್ಕೆ ಈಡಾಗಿದ್ದವು.
ಈ ನಡುವೆ ಕೋಳಿ ಸಾಗಿಸುತ್ತಿದ್ದ ಲಾರಿ ಕೂಡ ಅವಘಡಕ್ಕೆ ಈಡಾಗಿದೆ. ಈ ಇದನ್ನೇ ಬಂಡವಾಳ ಮಾಡಿಕೊಂಡು ಜನತೆ ಅವಸರದಿಂದ ಕೋಳಿಗಳನ್ನು ಸಂಗ್ರಹಿಸಿ ಸ್ಥಳದಿಂದ ಪಲಾಯನ ಮಾಡುತ್ತಿರುವುದು ಕಂಡುಬಂದಿತು. ಕೆಲವರು ಕೋಳಿಗಳನ್ನು ಚೀಲಗಳಲ್ಲಿ ಕಟ್ಟುವ ಮಟ್ಟಕ್ಕೆ ಹೋದರು ಎನ್ನಲಾಗಿದ್ದು, ಘಟನೆಯ ಈ ವಿಡಿಯೋಗಳು ವೈರಲ್ ಆಗಿದೆ