ವೈದ್ಯರ ನಕಲಿ ಸಹಿ, ನಕಲಿ ಬಿಲ್‌ ಸೃಷ್ಟಿಸಿ ವಂಚನೆಗೆ ಯತ್ನ..!

ಡುಪಿ: ಖಾಸಗಿ ಆಸ್ಪತ್ರೆಯ ವೈದ್ಯರ ನಕಲಿ ಸಹಿ ಬಳಸಿ ನಕಲಿ ಬಿಲ್‌, ಡಿಸ್ಚಾರ್ಜ್ ಸಮ್ಮರಿಯನ್ನು ಸೃಷ್ಟಿಸಿ ವಿದೇಶದ ವಿಮೆ ಕಂಪೆನಿಗೆ ಸಲ್ಲಿಸಿ ವಂಚನೆಗೆ ಯತ್ನಿಸಿದ ಘಟನೆ ನಡೆದಿದೆ.

ಆರೋಪಿ ಜಹೀನಾಬ್‌ ಮುಜಾಫ‌ರ್‌ ಅವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ 2019ರ ಆ.

3ರಂದು ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಅನಂತರ ಯಾವುದೇ ಚಿಕಿತ್ಸೆ ಪಡೆದಿಲ್ಲ. 2ನೇ ಆರೋಪಿ ಮುಜಾಫ‌ರ್‌ ಅಲಿ ಮೊಹಮ್ಮದ್‌ ಶರೀಫ್, 3ನೇ ಆರೋಪಿ ಲುಭಾಬಾನು ಮತ್ತು 4ನೇ ಆರೋಪಿ ಪುರ್ಕಾನ್‌ ಮುಜಾಫ‌ರ್‌ ಅವರು ಸೇರಿಕೊಂಡು ಡಾಕ್ಟರ್‌ ಅವರ ನಕಲಿ ಸಹಿಯನ್ನು ಬಳಸಿ ನಕಲು ಬಿಲ್‌ಗ‌ಳು ಮತ್ತು ಡಿಸಾcರ್ಚ್‌ ಸಮ್ಮರಿಯನ್ನು ವಿದೇಶದ ವಿಮೆ ಕಂಪೆನಿಗೆ ಸಲ್ಲಿಸಿದ್ದರು.

ವಿಮೆ ಕಂಪೆನಿಯವರು ಬಿಲ್‌ಗ‌ಳ ಮತ್ತು ಡಿಸ್ಚಾರ್ಜ್ ಸಮ್ಮರಿಗಳ ನೈಜತೆ ತಿಳಿಯಲು ಆಸ್ಪತ್ರೆಗೆ ಕಳುಹಿಸಿದ್ದು, ಆರೋಪಿಗಳು ಮೋಸ ಮಾಡುವ ಉದ್ದೇಶದಿಂದ ಫೋರ್ಜರಿ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply