ಮಣಿಪಾಲ: ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ನಡೆಸಿರುವ ಮಣಿಪಾಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪವನ್, ಚೇತನ್ ಸಿ.ಬಿ. ಮತ್ತು ಪಂಜು ಬಂಧಿತ ಆರೋಪಿಗಳು. ಹೆರ್ಗಾ ಗ್ರಾಮದ ಈಶ್ವರ ನಗರ ಎಂಬಲ್ಲಿ ಮಹಿಳೆಯರನ್ನು ಪುಸಲಾಯಿಸಿ ಕರೆ ತಂದು ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ ಪವನ್ ಎಂಬಾತನನ್ನು ವಶಕ್ಕೆ ಪಡೆದರು.
ಬಳಿಕ ಆತ ನೀಡಿದ ಮಾಹಿತಿಯಂತೆ ಬೊಮ್ಮರಬೆಟ್ಟು ಎಂಬಲ್ಲಿರುವ ಮನೆಗೆ ದಾಳಿ ನಡೆಸಿ ಚೇತನ್ ಸಿ.ಬಿ. ಮತ್ತು ಪಂಜು ಎಂಬವರನ್ನು ವಶಕ್ಕೆ ಪಡೆದು ಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.