
ಬೆಂಗಳೂರಿನ ಮತ್ತೊಂದು ವಿದ್ಯಾ ಸಂಸ್ಥೆಗೆ ಬಾಂಬ್ ಬೆದರಿಕೆ ಬಂದಿದೆ. ಸ್ಕೂಲ್ ಒಳಗೆ ಬಾಂಬ್ ಇಟ್ಟಿದ್ದೀವಿ ಬೆಳಗ್ಗೆ 10:20ಕ್ಕೆ ಬ್ಲಾಸ್ಟ್ ಆಗಲಿದೆ ಎಂದು ದುಷ್ಕರ್ಮಿಗಳು ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಹಾಕಿದ್ದಾರೆ.



ಹೌದು. ಈ ಬಾಂಬ್ ಬೆದರಿಕೆಯು Sahukarisrinuvasarao65@gmail.com ಮೇಲ್ನಿಂದ ಬಂದಿದೆ. ‘ಸ್ಕೂಲ್ ಒಳಗೆ ಬಾಂಬ್ ಇಟ್ಟಿದ್ದೀವಿ ಬೆಳಗ್ಗೆ 10:20ಕ್ಕೆ ಬ್ಲಾಸ್ಟ್ ಆಗಲಿದೆ’ ಎಂದು ದುಷ್ಕರ್ಮಿಗಳು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಬಾಂಬ್ ಬೆದರಿಕೆ ಮೇಲ್ ಬಂದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಭದ್ರತಾ ಅಧಿಕಾರಿಗಳು, ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಕೇಂದ್ರೀಯ ವಿದ್ಯಾಲಯ ಪ್ರಿನ್ಸಿಪಾಲ್ ಅಮೃತಬಾಲ ಅವರ ದೂರಿನ ಆಧಾರದ ಮೇಲೆ ಯಶವಂತಪುರ ಠಾಣೆಯ ಪೊಲೀಸರು ‘ಹುಸಿ ಬಾಂಬ್ ಬೆದರಿಕೆ’ ಕೇಸ್ ದಾಖಲಿಸಿಕೊಂಡ ತನಿಖೆ ಆರಂಭಿಸಿದ್ದಾರೆ.