ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನ ಕುಕ್ಕೊಡು ಎಂಬಲ್ಲಿ ಇತ್ತೀಚಿಗೆ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ ಮೂರು ಜನ ಮೃತಪಟ್ಟಿದ್ದರು. ಇದೀಗ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿಯನ್ನ ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನ ಅನಿಲ್ ಎಂ ಡೇವಿಡ್ (49) ಎಂದು ಹೇಳಲಾಗುತ್ತಿದ್ದು, ಬೆಂಗಳೂರು ಉತ್ತರ ದಿವಾನರ ಪಾಳ್ಯ ನಿವಾಸಿ ಅನಿಲ್ ಎಂದು ಹೇಳಲಾಗುತ್ತಿದೆ. ಹೆಚ್ಚು ಪಟಾಕಿ ರಾಸಾಯನಿಕ ಸರಬರಾಜು ಮಾಡಿತ್ತಿದ್ದ ಎಂದು ಆರೋಪಿಸಲಾಗಿದೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳ ಠಾಣೆ ಪೋಲೀಸರು ಇದೀಗ ಅನಿಲ್ ಡೇವಿಡ್ ನನ್ನು ಬಂಧಿಸಿದ್ದಾರೆ. ಪಟಾಕಿ ಸ್ಪೋಟ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣುರಿನ ಕುಕ್ಕೇಡಿ ಗ್ರಾಮದಲ್ಲಿ ಈ ಪಟಾಕಿ ದುರಂತ ಸಂಭವಿಸಿತ್ತು.
ಘಟನೆ ಹಿನ್ನೆಲೆ?
ಪಟಾಕಿ ಗೋದಾಮಿನಲ್ಲಿ ಸ್ಫೋಟಗೊಂಡು ಮೂವರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿ ದುರಂತ ಸಂಭವಿಸಿತ್ತು. ಕೇರಳ ಮೂಲದ ಸ್ವಾಮಿ(55), ವರ್ಗಿಸ್(68) ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಚೇತನ್(25) ಮೃತರಾಗಿದ್ದರು. ಬಶೀರ್ ಎಂಬುವರಿಗೆ ಸೇರಿದ ಸಾಲಿಡ್ ಫೈರ್ ವರ್ಕ್ಸ್ ಪಟಾಕಿ ಗೋದಾಮಿನಲ್ಲಿ ಅವಘಡ ಸಂಭವಿಸಿದೆ. ಪಟಾಕಿ ಸ್ಫೋಟದ ರಭಸಕ್ಕೆ ಗೋದಾಮಿನಿಂದ ಹೊರಗೆ ಕಾರ್ಮಿಕ ಹಾರಿಬಿದ್ದಿದ್ದಾರೆ. ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿತ್ತು.
ಈಗಾಗಲೇ ಸ್ಫೋಟದಿಂದ ಮೂವರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಯ್ಯದ್ ಬಶೀರ್ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ವೇಣೂರಿನಿಂದ ಪರಾರಿಯಾಗುತ್ತಿದ್ದಾಗ ಸುಳ್ಯದಲ್ಲಿ ಬಶೀರ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೀಗ ಅನಿಲ್ ಎಂ ಡೇವಿಡ್ (49) ಎಂದು ಹೇಳಲಾಗುತ್ತಿದ್ದು, ಬೆಂಗಳೂರು ಉತ್ತರ ದಿವಾನರ ಪಾಳ್ಯ ನಿವಾಸಿ ಅನಿಲ್ ಎಂದು ಹೇಳಲಾಗುತ್ತಿದೆ. ಹೆಚ್ಚು ಪಟಾಕಿ ರಾಸಾಯನಿಕ ಸರಬರಾಜು ಮಾಡಿತ್ತಿದ್ದ ಎಂದು ಆರೋಪಿಸಲಾಗಿದೆ ಎಂದು ತಿಳಿದು ಬಂದಿದೆ.