
ದ ಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇದರ ವತಿಯಿಂದ 3/01/2024ರಂದು ಉಜಿರೆ SDM ಕಾಲೇಜ್ ನಲ್ಲಿ ನಡೆದ ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದಲ್ಲಿ ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ತಂಡ ವಾಲಿಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ ಒಟ್ಟು ಎಂಟು ತಂಡಗಳು ಭಾಗವಹಿಸಿದ ಈ ಪಂದ್ಯಾಟದಲ್ಲಿ ಬೆಳ್ತಂಗಡಿ ತಂಡವುದ್ವಿತೀಯ ಪ್ರಶಸ್ತಿಯನ್ನು ಪಡೆದಿರುತ್ತದೆ. ಸತತ ಹದಿನೈದು ವರ್ಷಗಳಿಂದ ಬಂಟ್ವಾಳ ತಂಡ ಚಾಂಪಿಯನ್ನಾಗಿ ಮೂಡಿಬಂದಿರುತ್ತದೆ, ತಂಡದಲ್ಲಿ ಕಪ್ತಾನ ರಫೀಕ್ ನಾರ್ಶಾ.ಪ್ರಶಾಂತ್ ಜೆಮ್ ,ಚಂದ್ರಹಾಸsvs ರಾಘವೇಂದ್ರ ಸಾಲೆತ್ತೂರು, ಮಿಥುನ್ ಮೊಡಂಕಾಪು, ಜಗದೀಶ್ ತುಂಬೆ,ಸುರೇಶ್ ಕಾರ್ಮೆಲ್, ಅಜಿತ್ ಶಾರದಾ, ನಿಖಿಲ್ ಕೈರಂಗಳ, ದೀಪಕ್ ಬುಡೋಳಿ, ತಿರುಮಲೇಶ್ ಹೋರಿಜಾನ್, ಪದ್ಮನಾಭl ಲೋರೆಟ್ಟು, ಸಫ್ವನ್ ಜೆನಿತ್ ಭಾಗವಹಿಸಿದ್ದರು. ವಿಜೇತ ತಂಡಕ್ಕೆತಾಲೂಕ್ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ತಾಲೂಕ್ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಜೇಂದ್ರ ರೈ ಅಳಿಕೆ ಮತ್ತು ಬಂಟ್ವಾಳ ತಾಲೂಕು ವಾಲಿಬಾಲ್ ಅಸೋಶಿಯೇಶನ್ ಇದರ ಅಧ್ಯಕ್ಷರಾದ ಸುಪ್ರೀತ್ ಆಳ್ವಾ ಅಭಿನಂದನೆ ಸಲ್ಲಿಸಿದ್ದಾರೆ


