
ಮಂಗಳೂರು: ಮಳಲಿ ಮಂದಿರ – ಮಸೀದಿ ವಿವಾದದಲ್ಲಿ ಮಸೀದಿಯ ಉತ್ಖನನ ಮಾಡಿ ಸರ್ವೇಗೆ ವಿಎಚ್ ಪಿ ಅರ್ಜಿ ವಿಚಾರಣೆ ಇಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ನಡೆಯಿತು.



ವಿಎಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ ಅವರು ಇಂದು ವಾದ ಮಂಡನೆ ಮಾಡಿದರು. ಮಸೀದಿ ಪರ ವಕೀಲರಿಂದ ಹೈಕೋರ್ಟ್ ತೀರ್ಪು ಪ್ರತಿ ತಲುಪಿದ ಬಳಿಕ ವಾದ ಮಂಡನೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಫೆ.17ಕ್ಕೆ ನ್ಯಾಯಾಲಯ ಮುಂದೂಡಿದೆ.