ಬಿಲಾಲ್ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ನೂತನ ಕಛೇರಿ ಉದ್ಘಾಟನೆ ಮತ್ತು ಲೋಗೋ ಬಿಡುಗಡೆ ಕಾರ್ಯಕ್ರಮ 9/2/2014 ರಂದು ಸುರತ್ಕಲ್ ಸಮೀಪದ ಕೃಷ್ಣಾಪುರದಲ್ಲಿ ನಡೆಯಿತು.
ಸಂಸ್ಥೆಯ ನೂತನ ಕಛೇರಿ ಉದ್ಘಾಟನೆ ಮಾಡುತ್ತಾ ಮುಂಬರುವ ಆಗಸ್ಟ್ ತಿಂಗಳಲ್ಲಿ ನಡೆಯುವ ಐದು ಜೋಡಿ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯ ಕ್ರಮದ ಕುರಿತು ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ವಿವರಿಸಿದರು.
ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ವಹಿಸಿದ್ದರು ಮತ್ತು ಮುಖ್ಯ ಅತಿಥಿಗಳಾಗಿ ಸಯ್ಯದ್ ಅಬೂಬಕರ್ ಮತ್ತು ಅಬ್ದುಲ್ ಖಾದರ್ ಮದನಿ ಭಾಗವಹಿಸಿ ಮಾತನಾಡಿದರು ಹಾಗೂ ಊರ ಗಣ್ಯ ವ್ಯಕ್ತಿಗಳಾದ ಮುಹಮ್ಮದ್,ಮುಹಮ್ಮದ್ ಹನೀಫ್ ಮತ್ತು ಅಬ್ದುಲ್ ಜಬ್ಬಾರ್ ಉಪಸ್ಥಿತರಿದ್ದರು ಮತ್ತು ಸಂಸ್ಥೆಯ ಪದಾಧಿಕಾರಿಗಳಾದ ಆಸಿಫ್,ಸಿನಾನ್, ಶಾಹಿಲ್,ಮಜೀದ್, ಹಮೀದ್ ಮತ್ತು ಊರಿನ ಗಣ್ಯ ವ್ಯಕ್ತಿಗಳು ಭಾಗವಹಿಸಿ ಶುಭಕೋರಿದರು.