Visitors have accessed this post 353 times.

ಬಂಟ್ವಾಳ : ಮರಳು ಸಾಗಾಟ : ಎಂಟು ಮಂದಿ ವಿರುದ್ಧ ಪ್ರಕರಣ ದಾಖಲು..!

Visitors have accessed this post 353 times.

ಬಂಟ್ವಾಳ : ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕರು ಹಾಗೂ ಅದರ ಮಾಲಕರ ವಿರುದ್ಧ ಪ್ರಕರಣ ದಾಖಲಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.ಸಜೀಪಮುನ್ನೂರಿನ ಸರ್ಫರಾಜ್ ಅಹಮ್ಮದ್, ಕುಲಾಲು ನಿವಾಸಿ ಅಬ್ದುಲ್ ಅಜೀಜ್, ಕುರಿಯಾಳದ ಕಿರಣ್, ಅಮ್ಟಾಡಿ ನಿವಾಸಿ ಅವಿಲ್ ಕ್ರಾಸ್ಟಾ, ಮಂಚಿ ನಿವಾಸಿ ಮೊಹಮ್ಮದ್ ಇಸ್ಮಾಯಿಲ್ / ರಶೀದ್, ಬಿ. ಮೂಡದ ಮೊಹಮ್ಮದ್ ಆರೀಫ್, ವಳಚ್ಚಿಲ್ ನ ಸತ್ತಾರ್, ಅಜರುದ್ಧೀನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಫೆ.12 ರಂದು ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣ ರವರು ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ತಲಪಾಡಿ ಎಂಬಲ್ಲಿ ತಪಾಸಣೆಗಾಗಿ ಟಿಪ್ಪರ್ ಲಾರಿಗಳನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ, ಸದ್ರಿ ಲಾರಿಗಳಲ್ಲಿ ಮರಳು ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ.ಈ ಬಗ್ಗೆ ಲಾರಿಗಳ ಚಾಲಕರಲ್ಲಿ ವಿಚಾರಿಸಿದಾಗ ಅವರುಗಳು ಯಾವುದೇ ದಾಖಲೆ/ಪರವಾನಿಗೆ ಪಡೆಯದೇ, ವಳಚ್ಚಿಲ ಎಂಬಲ್ಲಿಂದ ಮರಳು ತುಂಬಿಸಿ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಮುಂದಿನ ಕಾನೂನುಕ್ರಮಕ್ಕಾಗಿ ಸದ್ರಿ ಲಾರಿಗಳನ್ನು, ಅದರಲ್ಲಿ ತುಂಬಿಸಿದ್ದ ಮರಳಿನೊಂದಿಗೆ ಸ್ವಾಧೀನಪಡಿಸಿ, ಸಜೀಪಮುನ್ನೂರಿನ ಸರ್ಫರಾಜ್ ಅಹಮ್ಮದ್, ಕುಲಾಲು ನಿವಾಸಿ ಅಬ್ದುಲ್ ಅಜೀಜ್, ಕುರಿಯಾಳದ ಕಿರಣ್, ಅಮ್ಟಾಡಿ ನಿವಾಸಿ ಅವಿಲ್ ಕ್ರಾಸ್ಟಾ, ಮಂಚಿ ನಿವಾಸಿ ಮೊಹಮ್ಮದ್ ಇಸ್ಮಾಯಿಲ್ / ರಶೀದ್, ಬಿ. ಮೂಡದ ಮೊಹಮ್ಮದ್ ಆರೀಫ್, ವಳಚ್ಚಿಲ್ ನ ಸತ್ತಾರ್, ಅಜರುದ್ಧೀನ್ ಎಂಬವರುಗಳ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ:- 41/2024 ಕಲಂ: 379 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *