Visitors have accessed this post 297 times.

ರಾಜ್ಯದ ಉರ್ದು ಶಾಲೆಗಳಲ್ಲಿ ಶುಕ್ರವಾರ ಬ್ಯಾಗ್ ರಹಿತ ದಿನ : ಮಕ್ಕಳಿಗೆ ಹಲವು ಚಟುವಟಿಕೆಗಳ ಆಯೋಜನೆ

Visitors have accessed this post 297 times.

ಬೆಂಗಳೂರು : ಶಾಲಾ ಮಕ್ಕಳಿಗೆ ಸಂತಸದಾಯಕ ಕಲಿಕೆ ನೀಡುವ ನಿಟ್ಟಿನಲ್ಲಿ ಎಲ್ಲ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರ ಮಕ್ಕಳ ಬ್ಯಾಗ್‌ ರಹಿತ ದಿನವನ್ನಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ.

ಉರ್ದು ಶಾಲೆಗಳು ಶುಕ್ರವಾರ ಅರ್ಧ ದಿನ ಮತ್ತು ಶನಿವಾರ ಪೂರ್ಣ ದಿನ ಶಾಲೆ ನಡೆಯುತ್ತಿರುವ ಕಾರಣ ʼಸಂಭ್ರಮ ಶನಿವಾರʼ ಆಚರಣೆಯನ್ನು ಶುಕ್ರವಾರ ಅಥವಾ ಶನಿವಾರ ಆಚರಿಸುವ ಕುರಿತು ಹಲವು ಶಾಲೆಗಳು ಮಾರ್ಗದರ್ಶನ ನೀಡುವಂತೆ ಕೋರಿದ್ದವು.

ಈ ಹಿನ್ನೆಲೆಯಲ್ಲಿ ಉರ್ದು ಶಾಲೆಗಳಲ್ಲಿ ಶನಿವಾರ ಪೂರ್ಣ ದಿನವಾಗಿದ್ದು, ಶುಕ್ರವಾರ ಅರ್ಧ ದಿನ ಶಾಲೆ ನಡೆಯುವುದರಿಂದ ʼಶುಕ್ರವಾರ ಬ್ಯಾಗ್‌ ರಹಿತʼ ದಿನವನ್ನಾಗಿ ಆಚರಿಸಲು ಕ್ರಮವಹಿಸುವಂತೆ ಡಿಎಸ್‌ಇಆರ್‌ಟಿ ನಿರ್ದೇಶಕಿ ವಿ.ಸುಮಂಗಲಾ ನಿರ್ದೇಶನ ನೀಡಿದ್ದಾರೆ.

ಮಕ್ಕಳಿಗೆ ಬ್ಯಾಗ್‌ ರಹಿತ ದಿನದಂದು ಹಲವು ಚಟುವಟಿಕೆಗಳನ್ನು ಆಯೋಜನೆ ಮಾಡಲಾಗುತ್ತದೆ.

ಏನೆಲ್ಲಾ ಕಲಿಕೆ?

ಘನತ್ಯಾಜ್ಯ ನಿರ್ವಹಣೆ

ಸುರಕ್ಷಿತ ತಂತ್ರಜ್ಞಾನ ಬಳಕೆ

ಸುರಕ್ಷತೆ ಮತ್ತು ಭದ್ರತೆ

ಸಾರ್ವಜನಿಕ ಸೌಕರ್ಯ

ರಸ್ತೆ ಸುರಕ್ಷತೆ

ಸ್ವಾಸ್ಥ್ಯ ಮತ್ತು ಶುಚಿತ್ವ

ಮಾದಕವಸ್ತು ಬಗ್ಗೆ ಜಾಗೃತಿ

ಲಿಂಗ ಸಮಾನತೆ

ಆರೋಗ್ಯಕರ ಜೀವನಶೈಲಿ

Leave a Reply

Your email address will not be published. Required fields are marked *