August 30, 2025
WhatsApp Image 2024-02-15 at 2.13.56 PM

ಕಾರ್ಕಳ: ಮೋಸ್ಟ್ ವಾಂಟೆಡ್‌ ನಕ್ಸಲೈಟ್ ಶ್ರೀಮತಿ ಅಲಿಯಾಸ್ ಉನ್ನಿಮಾಯಳನ್ನು ಪೊಲೀಸರು ಕಾರ್ಕಳಕ್ಕೆ ಕರೆ ತಂದಿದ್ದಾರೆ. 2011 ಡಿಸೆಂಬರ್ 19 ರಂದು ಪೊಲೀಸ್ ಮಾಹಿತಿದಾರ ಮಲೆಕುಡಿಯ ಜನಾಂಗದ ಸದಾಶಿವ ಗೌಡನ ಅಪಹರಣ, ಹತ್ಯೆ ಪ್ರಕರಣ ಸಂಬಂಧ ಸ್ಥಳ ಮಹಜರು ಮಾಡಲು ಶ್ರೀಮತಿಯನ್ನು ಪೊಲೀಸರು ಕಾರ್ಕಳಕ್ಕೆ ಕರೆತರಲಾಗಿದೆ.

ಹಲವು ವರ್ಷಗಳಿಂದ ಕರ್ನಾಟಕ ಮತ್ತು ಕೇರಳ ರಾಜ್ಯದ ಪೊಲೀಸರಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ನಕ್ಸಲ್ ನಾಯಕಿ ಮೂಲತಃ ಶೃಂಗೇರಿ ನಿವಾಸಿ ಶ್ರೀಮತಿ@ಉಣ್ಣಿಮಾಯಾ(28) ಕಳೆದ ನವೆಂಬರ್ 7 ರಂದು ಕೇರಳ ಪೊಲೀಸರಿಗೆ ಸೆರೆಸಿಕ್ಕಿದ್ದು. ನಂತರ ಈಕೆ ಕೇರಳ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಳುಈಕೆ ಕೇರಳದ ವಯನಾಡು ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸೆರೆಯಾಗಿದ್ದಳು.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೆಳಗೋಡುಕೊಡಿಗೆ ನಿವಾಸಿಯಾಗಿರುವ ಶ್ರೀಮತಿ ಕೇರಳ-ಕರ್ನಾಟಕ ಗಡಿಭಾಗದಲ್ಲಿ ಆ್ಯಕ್ಟಿವ್ ಆಗಿದ್ದಳು. ಸದಾಶಿವ ಗೌಡ ಹತ್ಯೆ ನಡೆಸಿದ ಕಾರ್ಕಳ ವ್ಯಾಪ್ತಿಯ ಕಬ್ಬಿನಾಲೆಗೆ ಬಾಡಿ ವಾರೆಂಟ್ ಮೇಲೆ ಶ್ರೀಮತಿಯನ್ನು ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಶ್ರೀಮತಿ ಕರೆ ತಂದು ಘಟನಾ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ. ಶ್ರೀಮತಿ ಮೇಲೆ ರಾಜ್ಯದ ಹಲವು ಠಾಣೆಗಳಲ್ಲಿ 9 ಪ್ರಕರಣಗಳಿವೆ.

About The Author

Leave a Reply