
ಮುಲ್ಕಿ: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಬಳ್ಕುಂಜೆ ಕೊಲ್ಲೂರು ಬಳಿಯ ನಿವಾಸಿ ಪ್ರಸ್ತುತ ಕಿನ್ನಿಗೋಳಿಯಲ್ಲಿ ವಾಸ್ತವ್ಯವಿರುವ ಬಸ್ ಮಾಲೀಕ ಪ್ರವೀಣ್ ಕುಮಾರ್ ( 41) ಪತ್ತೆಯಾಗಿದ್ದಾರೆ.



ಉದ್ಯಮದಲ್ಲಿ ಆಗಿರುವ ತೊಂದರೆಯಿಂದ ಮಾನಸಿಕವಾಗಿ ನೊಂದು ಏಕಾಏಕಿ ಬೆಳಗಾಂ ಕಡೆಗೆ ಹೋಗಿದ್ದು ಬಳಿಕ ಮನಸ್ಸು ಬದಲಾಯಿಸಿ ವಾಪಸು ಮನೆ ಕಡೆ ಬಂದಿರುತ್ತಾರೆ ಎಂದು ಮುಲ್ಕಿ ಪೊಲೀಸರು ತಿಳಿಸಿದ್ದಾರೆ.
ಕಿನ್ನಿಗೋಳಿ ಮುಲ್ಕಿ ಪರಿಸರದಲ್ಲಿ ಬಸ್ ಮಾಲೀಕರಾಗಿದ್ದ ಪ್ರವೀಣ್ ಕುಮಾರ್ ರವರು ನಿಕಿಶಾ ಎಂಬ ಸುಮಾರು 7 ಬಸ್ಸನ್ನು ನಡೆಸುತ್ತಿದ್ದು, ಶುಕ್ರವಾರ ಬೆಳಿಗ್ಗೆಯಿಂದ ತಮ್ಮ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಕೆಲಸದ ನಿಮಿತ್ತ ಹೋದವರು ನಾಪತ್ತೆಯಾಗಿದ್ದರು ಈ ನಡುವೆ ನಾಪತ್ತೆಯಾದ ಪ್ರವೀಣ್ ಕುಮಾರ್ ರವರ ದ್ವಿಚಕ್ರವಾಹನ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಯ ಬಪ್ಪನಾಡು ಸೇತುವೆ ಬಳಿ ದೊರಕಿದ್ದರಿಂದ ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾಧರ ಹಾಗೂ ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆ (ಎಸ್ ಡಿ ಆರ್ ಎಫ್) ಯಿಂದ ಶಾಂಭವಿ ನದಿಯಲ್ಲಿ ಹಾಗೂ ಆಸು ಪಾಸಿನಲ್ಲಿ ಶೋಧ ನಡೆಸಿದ್ದರು.