August 30, 2025
WhatsApp Image 2024-02-16 at 4.15.49 PM

ವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವ್ರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಾಗಿ ಅವರು ಇಂದು (ಫೆಬ್ರವರಿ 16) ಉತ್ತರ ಪ್ರದೇಶದ ಚಂದೌಲಿಯಲ್ಲಿ ನಡೆಯಲಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಮತ್ತು ಚೇತರಿಸಿಕೊಂಡ ನಂತರ ಯಾತ್ರೆಗೆ ಸೇರುವುದಾಗಿ ಸ್ವತಃ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, “ಭಾರತ್ ಜೋಡೋ ನ್ಯಾಯ್ ಯಾತ್ರೆ ಉತ್ತರ ಪ್ರದೇಶವನ್ನ ತಲುಪಲು ನಾನು ಕುತೂಹಲದಿಂದ ಕಾಯುತ್ತಿದ್ದೆ, ಆದರೆ ಅನಾರೋಗ್ಯದಿಂದಾಗಿ ನನ್ನನ್ನು ಇಂದೇ ಆಸ್ಪತ್ರೆಗೆ ದಾಖಲಿಸಬೇಕಾಯಿತು. ನನಗೆ ಚೇತರಿಸಿಕೊಂಡ ಕೂಡಲೇ ನಾನು ಪ್ರಯಾಣದಲ್ಲಿ ಸೇರುತ್ತೇನೆ. ಅಲ್ಲಿಯವರೆಗೆ, ಚಂದೌಲಿ-ಬನಾರಸ್ ತಲುಪುವ ಎಲ್ಲಾ ಪ್ರಯಾಣಿಕರು, ನನ್ನ ಸಹೋದ್ಯೋಗಿಗಳು ಮತ್ತು ಪ್ರಯಾಣಕ್ಕಾಗಿ ಶ್ರದ್ಧೆಯಿಂದ ತಯಾರಿ ನಡೆಸುತ್ತಿರುವ ಉತ್ತರ ಪ್ರದೇಶದ ಪ್ರೀತಿಯ ಸಹೋದರನಿಗೆ ನಾನು ಶುಭ ಹಾರೈಸುತ್ತೇನೆ” ಎಂದಿದ್ದಾರೆ.

About The Author

Leave a Reply