ತೆರಿಗೆ ಮುಸ್ಲಿಮರ ಮನೆಗೆ, ಪೂಂಜಾ ಹೇಳಿಕೆ, ಕೊಲ್ಲಿ ಅನಿವಾಸಿಗಳ ಹಣ ಕರಾವಳಿ ಅಭಿವೃದ್ಧಿಗೆ : ಕೆ.ಅಶ್ರಫ್

ಮಂಗಳೂರು: ಇಂದಿನ ರಾಜ್ಯ ಸರ್ಕಾರದ ಬಜೆಟ್ ವಿರೋಧಿಸಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸುವ ಮಧ್ಯೆ ಹರೀಶ್ ಪೂಂಜಾ ತಾನು ಪೋಸ್ಟ್ ಹಾಕಿ ದಕ್ಷಿಣ ಕನ್ನಡ ಜಿಲ್ಲೆಯ ತೆರಿಗೆ ಮುಸ್ಲಿಮರ ಮನೆಗೆ ಎಂದು ವಿವಾದ ಸೃಷ್ಟಿಸಿದ್ದಾರೆ.

ಹರೀಶ್ ಪೂಂಜಾ ತಿಳಿದಿರಲಿ,ಕರಾವಳಿ ಜಿಲ್ಲೆಯ ಮುಸ್ಲಿಮರು ಮಧ್ಯಪ್ರಾಚ್ಯ ದೇಶದಲ್ಲಿ ಬೆವರು ಸುರಿಸಿದ ಪ್ರತಿ ಹಣವನ್ನು ಜಿಲ್ಲೆಯ ಆರ್ಥಿಕ ಅಭಿವೃದ್ದಿಗೆ ತಂದು ಸುರಿಸಿದ್ದಾರೆ. ಈ ದೇಶದಲ್ಲಿ ವಾಸಿಸುವ ಅನಿವಾಸಿ ಮುಸ್ಲಿಮರು ಈ ದೇಶದ ವಿದೇಶಿ ವಿನಿಮಯ ಮೂಲಕ ಜಿಲ್ಲೆಯ ಆರ್ಥಿಕ ಅಭಿವೃದ್ದಿ, ಬ್ಯಾಂಕಿಂಗ್ ಠೇವಣಿ, ಜಿಲ್ಲೆಯ ಅಗಾಧ ವಾಣಿಜ್ಯ ಸಂಸ್ಥೆ,ಆರೋಗ್ಯ ಸಂಸ್ಥೆ ಇತ್ಯಾದಿಗಳಿಂದ ಸರಕಾರಕ್ಕೆ ಸಲ್ಲಿಸಲ್ಪಡುವ ತೆರಿಗೆಯ ಮೂಲದ ಬಗ್ಗೆ ಪೂಂಜಾ ಆರಿಯಲಿ.

ದೇಶದ ಮುಸ್ಲಿಮ್ ಯುವಕರು ಸ್ವಯಂ ಪ್ರೇರಿತ ಮಾನವೀಯ ರಕ್ತದಾನ, ಆರೋಗ್ಯ ಸಾಂಕ್ರಾಮಿಕ ತುರ್ತು ಸಂಧರ್ಬದಲ್ಲಿ ಮುಸ್ಲಿಮ್ ಯುವಕರು ಸಲ್ಲಿಸಿದ ಮಾನವೀಯ ಸೇವೆಯನ್ನು ಅರಿಯಲಿ. ಈ ಜಿಲ್ಲೆಯಲ್ಲಿ ಮುಸ್ಲಿಮರು ಸ್ತಾಪಿಸಿದಂತಹ ಶೈಕ್ಷಣಿಕ ಸಂಸ್ಥೆಯ ಮೂಲಕ ಈ ಜಿಲ್ಲೆಯ ಜನರಿಗೆ ನೀಡಿದ ಅಧ್ಯಾಪಕ,ಪ್ರಾದ್ಯಾಪಕ ನೌಕರಿಯನ್ನು ಅರಿಯಲಿ. ಈ ಜಿಲ್ಲೆಯಲ್ಲಿ ಮುಸ್ಲಿಮರು ಅನ್ಯ ವಾಣಿಜ್ಯ ಸಂಸ್ಥೆಗಳಲ್ಲಿ ಪಾಲಿಸುವ ಗ್ರಾಹಕತ್ವವನ್ನು ಅರಿಯಲಿ. ದ.ಕ.ಜಿಲ್ಲೆಯ ತೆರಿಗೆಯ ವಿಷಯ ಪ್ರಸ್ತಾಪಿಸುವ ಪೂಂಜಾ ವಾಸ್ತವ ಏನು ಎಂದು ತಿಳಿಯಲಿ. ಜನರನ್ನು ಮೂರ್ಖರನ್ನಾಗಿಸುವ ಪೂಂಜಾ ಪ್ರಯತ್ನ ಇನ್ನಾದರೂ ನಿಲ್ಲಲಿ.

Leave a Reply