ಮಂಗಳೂರು : ಶಾಲೆಯೆದುರು ಶಾಸಕ ವೇದವ್ಯಾಸ ಕಾಮತ್ ಗೂಂಡಾಗಿರಿ ನಡೆದಿದೆ – ದಿನೇಶ್ ಗುಂಡೂರಾವ್

ಮಂಗಳೂರು: ಸಂತ ಜೆರೊಸಾ ಶಾಲೆಯಲ್ಲಿ ಶಿಕ್ಷಕಿಯಿಂದ ಹಿಂದೂಧರ್ಮದ ನಿಂದನೆ ಪ್ರಕರಣದ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ,‌ ಈ ಘಟನೆಯಿಂದ ಜಿಲ್ಲೆಗೆ ಡ್ಯಾಮೇಜ್ ಆಗಿದೆ. ಮಕ್ಕಳನ್ನು ರಸ್ತೆಯಲ್ಲಿ‌ ನಿಲ್ಲಿಸಿ ಸಮಾಜ ಒಡೆಯುವ ಕೆಲಸ ಮಾಡಿ, ಶಾಲೆಯೆದುರು ಶಾಸಕ ವೇದವ್ಯಾಸ ಕಾಮತ್ ಗೂಂಡಾಗಿರಿ ಮೆರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ವಾರ್ಥಕ್ಕಾಗಿ ಹಿಂದೂಧರ್ಮದ ಹೆಸರಲ್ಲಿ ಪ್ರಚೋದಿಸಲಾಗುತ್ತದೆ. ಭರತ್ ಶೆಟ್ಟಿ, ಶರಣ್ ಪಂಪ್ ವೆಲ್ ಮೇಲೆ ಸುಳ್ಳು ಕೇಸ್ ದಾಖಲಾಗಿಲ್ಲ. ಎಲ್ಲಿ ಹೇಳಿಕೆ ನೀಡಿದರೂ ಅದು ತಪ್ಪೇ. ಲಂಡನ್ ನಲ್ಲಿ ಕುಳಿತು ಹೇಳಿದರೂ ತಪ್ಪೇ. ಕಾನ್ವೆಂಟ್ ಶಾಲೆಗಳಿಗೆ ಹೋಗಬೇಡಿ ಅನ್ನೋದು ತಪ್ಪಲ್ಲವಾ?. ಪ್ರಚೋದನಕಾರಿ ಹೇಳಿಕೆಯ ವಿರುದ್ಧ ಕೇಸ್ ಹಾಕಲಾಗಿದೆ. ಪೊಲೀಸ್ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Leave a Reply