ಬಂಟ್ವಾಳ: ಖಾಸಗಿ ಬಸ್ಸು ಹಾಗೂ ಕಾರಿನ ಮಧ್ಯೆ ಢಿಕ್ಕಿ ಸಂಭವಿಸಿ ಕಾರು ಚಾಲಕ ಹಾಗೂ ಬಸ್ಸಿನ ನಿರ್ವಾಹಕ, ಪ್ರಯಾಣಿಕೆ ಗಾಯಗೊಂಡ ಘಟನೆ ಫೆ.17ರಂದು ಬೆಳಗ್ಗೆ ಕರಿಯಂಗಳ ಗ್ರಾಮದ ಮಂಗಾಜೆಯಲ್ಲಿ ನಡೆದಿದೆ.
ಕಾರು ಚಾಲಕ ಹೊನ್ನಯ್ಯ ಪೂಜಾರಿ, ಬಸ್ಸಿನ ನಿರ್ವಾಹಕ ಶ್ರೀಕಾಂತ್ ಹಾಗೂ ಪ್ರಯಾಣಿಕೆ ಹೈಡ ಕುಟಿನ್ಹಾ ಗಾಯಗೊಂಡಿದ್ದಾರೆ. ಇವರಲ್ಲಿ ಹೊನ್ನಯ್ಯ ಪೂಜಾರಿ ಅವರು ಒಳರೋಗಿಯಾಗಿ ದಾಖಲಿಸಲ್ಪಟ್ಟಿದ್ದಾರೆ.
ಬಸ್ಸು ಮುಚ್ಚೂರಿನಿಂದ ಬಜ್ಪೆ- ಕೈಕಂಬ ಮಾರ್ಗವಾಗಿ ಬಿ.ಸಿ.ರೋಡು ಕಡೆಗೆ ಆಗಮಿಸುತ್ತಿದ್ದ ವೇಳೆ ಎದುರಿನಿಂದ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಕಾರು ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆಯಲ್ಲಿ ಕಾರು ಹಾಗೂ ಬಸ್ಸಿನ ಮುಂಭಾಗ ಜಖಂಗೊಂಡಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.