
ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ವತಿಯಿಂದ ಸ್ಥಾಪನಾ ದಿನಾಚರಣೆ ಯನ್ನು ಬದ್ರಿಯಾ ಜುಮಾ ಮಸೀದಿ ವಠಾರ ದಲ್ಲಿ ನಡೆಯಿತು.ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ಅಧ್ಯಕ್ಷ ಜುಬೈರ್ ವಹಿಸಿದರು.ಧ್ವಜಾರೋಹಣ ವನ್ನು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ ನೆರವೇರಿಸಿ ಶುಭ ಹಾರೈಸಿದರು .



ಬಹು ನೌಫಾಲ್ ರಹ್ಮಾನ್ ಅಜ್ಹರಿ ದುವಾ ನೇರವೇರಿಸಿ ಮಾತನಾಡಿ ಸಮಸ್ತ ನಡೆದು ಬಂದ ವಿಷಯವನ್ನು ವಿವರಿಸಿದರು.ಅರಂತೋಡಿನಲ್ಲಿ ಎಸ್ ಕೆ ಎಸ್ ಎಸ್ ಎಫ್ ಸಂಘಟನೆ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ಜಮಾ ಆತ್ ನಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ಕೈ ಜೋಡಿಸುತಿದೆ ಎಂದರು. .ಜುಮ್ಮಾ ಮಸೀದಿ ಕಾರ್ಯದರ್ಶಿ ಕೆ.ಎಂ. ಮುಸಾನ್, ಅಬುಬಕ್ಕರ್ ಪಾರೆಕ್ಕಲ್,ಅಮೀರ್ ಕುಕ್ಕುಂಬಳ,ನಿವೃತ ಉಪನ್ಯಾಸಕ ಅಬ್ದುಲ್ಲಾ ಮಾಸ್ಟರ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಷನ್ ಅಧ್ಯಕ್ಷ ಮಜೀದ್,ಉಮ್ಮರ್ ಎ. ಎ.ಮುಜೀಬ್,ಸಂಸು ದ್ದಿನ್ ಪೆಲ್ತಡ್ಕ ,ಹನೀಫ್ ಎಸ್. ಇ, ತಾಜುದ್ದೀನ್ ಅರಂತೋಡು, ,ಮೋಯಿದು ಕುಟ್ಟಿ, ಎ.ಹಮೀದ್,ರಝಾಕ್ ಬಿಳಿ ಯಾರ್,ಅಕ್ಮಲ್ ಸೇರಿದಂತೆ ನುಸ್ರತುಲ್ ಇಸ್ಲಾಂ ಮದರಸ ವಿದ್ಯಾರ್ಥಿ ಗಳು ಭಾಗವಹಿಸಿದರು.ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ಸಂಸುದ್ದಿನ್ ಸ್ವಾಗತಿಸಿ ತಾಜುದ್ದೀನ್ ಅರಂತೋಡು ವಂದಿಸಿದರು.