November 8, 2025
WhatsApp Image 2024-02-20 at 11.23.15 AM

ಮಂಗಳೂರ : ಶಿಕ್ಷಕಿಯಿಂದ ಶ್ರೀ ರಾಮನ ಅವಹೇಳನ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ದೂರುದಾರ ಶರತ್ ಕುಮಾರ್ ಹಾಗೂ ಪಿಎಚ್‌ಪಿ ಮುಖಂಡರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.

 

ಇಂದು ಮಧ್ಯಾಹ್ನ 12 ರಿಂದ 2 ಗಂಟೆಯ ಒಳಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ತನಿಖಾ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಪಾಂಡೇಶ್ವರ ಠಾಣೆಗೆ ಪೋಷಕ ಶರತ್ ಕುಮಾರ್ ದೂರು ನೀಡಿದ್ದರು ಎಂದು ಹೇಳಲಾಗುತ್ತಿದೆ.ಅಲ್ಲದೆ ವಿಶ್ವವಿಂದ ಪರಿಷತ್ ಜಿಲ್ಲಾಧ್ಯಕ್ಷ ಎಚ್‍ಕೆ ಪುರುಷೋತ್ತಮ್ ಗೆ ಕೂಡ ನೋಟಿಸ್ ನೀಡಲಾಗಿದೆ.

ಇಬ್ಬರಿಗೂ ನೋಟಿಸ್ ನೀಡಲಾಗಿದೆ ಮೌಖಿಕವಾಗಿ ಅಥವಾ ಲಿಖಿತ ರೂಪದಲ್ಲಿ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಅದಲ್ಲದೆ ಸೂಕ್ತ ದಾಖಲೆಗಳನಾದರೂ ಇದ್ದಲ್ಲಿ ಪ್ರಸ್ತುತಪಡಿಸಬಹುದಾಗಿದೆ. ಪ್ರಕರಣ ಸಂಬಂಧ ಪಿ ಎಚ್ ಪಿ ಡಿ ಪಿ ಐ ಕಚೇರಿಗೆ ಗುತ್ತಿಗೆ ಹಾಕಿದ್ದು ಪ್ರಕರಣದ ತನಿಖೆಗೆ ವಿಶ್ವ ಹಿಂದೂ ಪರಿಷತ್ತು ಕಂಡರು ಮನವಿ ಮಾಡಿದ್ದರು.ಹೀಗಾಗಿ ವಿ ಎಚ್ ಮುಖಂಡನಿಗೂ ತನಿಕಾ ಸಮಿತಿ ನೋಟಿಸ್ ನೀಡಿದೆ.

About The Author

Leave a Reply