
ಆನೇಕಲ್: ಲಕ್ಷ ಲಕ್ಷ ಹಣ ಕೊಟ್ಟು ನೀವೆನಾದರೂ ಮನೆ ಲೀಸ್ಗೆ ಪಡೆಯುವ ಮುನ್ನ ಎಚ್ಚರದಿಂದ ಇರಿ ಯಾಕೆಂದರೆ ಯಾವ ಕ್ಷಣದಲ್ಲಾದರೂ ಬ್ಯಾಂಕಿನವರು ನೀವಿರುವ ಮನೆಯನ್ನು ಸೀಜ್ ಮಾಡಬಹುದು. ಸದ್ಯ ಖತರ್ನಾಕ್ ದಂಪತಿಯ ಕೆಲಸಕ್ಕೆ ಗ್ರಾಹಕರು ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ.



ಗ್ರಾಹಕರು ಫ್ಯಾಟ್ಗೆ ಬಂದ ಎರಡು ಮೂರು ತಿಂಗಳಿಗೆ ಬ್ಯಾಂಕ್ನಿಂದ ನೋಟಿಸ್ ಬರುತ್ತಿತ್ತು. ನೋಟಿಸ್ ಬಂದರೂ ದಂಪತಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮಾಲೀಕರು ಲೋನ್ ಕಟ್ಟದೆ ಇದ್ದಾಗ ಬ್ಯಾಂಕ್ ಸಿಬ್ಬಂದಿ ಬಂದ ಮನೆಯ ಸಾಮಾನುಗಳನ್ನು ಜೊತೆಗೆ ಬೀಗ ಜಡಿದು ಹೋಗುತ್ತಾರೆ. ಲಕ್ಷಾಂತರ ಹಣ ನೀಡಿ ಅತ್ತ ಹಣವೂ ಇಲ್ಲದೆ ಇತ್ತ ಫ್ಲ್ಯಾಟ್ ಇಲ್ಲದೆ ಗ್ರಾಹಕರು ಬೀದಿಗೆ ಬೀಳುತ್ತಿದ್ದರು. ಇದೇ ರೀತಿ ಹತ್ತಾರು ಮಂದಿ ವಂಚನೆಗೆ ಬಿದ್ದು ಬೀದಿಗೆ ಬಿದ್ದಿದ್ದಾರೆ.
ದಂಪತಿಯನ್ನು ವಶಕ್ಕೆ ಪಡೆದಿರುವ ಆನೇಕಲ್ ಪೊಲೀಸರು
ಗ್ರಾಹಕರೇ ಇವರನ್ನು ಹುಡುಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಖತರ್ನಾಕ್ ದಂಪತಿಯ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ದಂಪತಿಯನ್ನು ವಶಕ್ಕೆ ಪಡೆದು, ತನಿಖೆಯನ್ನು ನಡೆಸುತ್ತಿದ್ದಾರೆ.
ಸದ್ಯ, ದಂಪತಿ ಅಜಿತ್ ಮತ್ತು ಸುಜಾತಾ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.