ರಿಯಾದ್ : ಸ್ನೇಹಿತರೊಂದಿಗೆ ಫುಟ್ಬಾಲ್ ಆಡುತ್ತಿದ್ದ ಕೇರಳ ಮೂಲದ ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೌದಿ ಅರೇಬಿಯಾದ ಮಕ್ಕಾದಲ್ಲಿ ಸಂಭವಿಸಿದೆ.
ಫುಟ್‌ಬಾಲ್ ಆಟವಾಡಿ ವಿಶ್ರಾಂತಿ ಪಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಕ್ಕಾದಲ್ಲಿ ಗೃಹ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕೇರಳ ಮಲಪ್ಪುರಂ ಅರೀಕೋಡ್ ಕಿಜಿಸೇರಿ ವಳದ ಎಳಂಗಾವ್ ಮೂಲದ ಪಂಪೋದನ್ ನೌಫಲ್ ಮೃತ ದುರ್ದೈವಿಯಾಗಿದ್ದಾನೆ. ನೌಫಲ್ ನವಾರಿಯಾದ ಮನೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಸ್ನೇಹಿತರೊಂದಿಗೆ ಫುಟ್ ಬಾಲ್ ಆಡಿದ ಬಳಿಕ ವಿಶ್ರಾಂತಿ ಪಡೆಯುತ್ತಿದ್ದಾಗ ಹೃದಯಾಘಾತವಾಗಿ ತಕ್ಷಣ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.