
ಕಡಬ : ಕಂಠಪೂರ್ತಿ ಕುಡಿದು ಕೆಎಸ್ಆರ್ ಟಿಸಿ ಬಸ್ ನಲ್ಲಿ ಬಿದ್ದು ಹೋರಳಾಡುತ್ತಿದ್ದ ಗ್ರಾಮಕರಣಿಕನೊಬ್ಬನನ್ನು ಕೆಎಸ್ಆರ್ ಟಿಸಿ ಬಸ್ ಚಾಲಕ ಸೀದಾ ಪೊಲೀಸ್ ಠಾಣೆಗೆ ಕರೆದು ತಂದು ಬಿಟ್ಟ ಘಟನೆ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಬಸ್ಸಿನಲ್ಲಿ ನಡೆದಿದೆ.
ಕಂಠಪೂರ್ತಿ ಕುಡಿದು ತೇಲಾಡುತ್ತಿದ್ದ ವ್ಯಕ್ತಿಯನ್ನು ಕಡಬ ತಾಲೂಕಿನ ಗೋಳಿತೊಟ್ಟುವಿನ ಗ್ರಾಮಕರಣಿಕ ನಾಗಸುಂದರ ಎಂದು ತಿಳಿದುಬಂದಿದೆ. ಈ ಹಿಂದೆಯು ಹಲವು ಬಾರಿ ಮದ್ಯಪಾನ ಮಾಡಿ ಸಿಕ್ಕಿ ಬಿದ್ದಿದ್ದು ನಾಗಸುಂದರನ ಮದ್ಯಪಾನದ ಚಟದ ಬಗ್ಗೆ ಮೇಲಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗೂ ದೂರು ನೀಡಲಾಗಿತ್ತು.



ನಾಗಸುಂದರನ ಮೇಲೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಕರ್ತವ್ಯದ ವೇಳೆಯೇ ಮದ್ಯಪಾನದ ಚಟ ಹೊಂದಿರುವ ನಾಗಸುಂದರನನ್ನು ಬಸ್ಸು ಚಾಲಕ ಬಸ್ಸನ್ನು ನೇರವಾಗಿ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ. ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ಎಚ್ಚರಿಕೆ ನೀಡಿ ಮುಂದೆ ಕುಡಿದು ಕೆಲಸಕ್ಕೆ ಬರುವುದಿಲ್ಲವೆಂದು ಮುಚ್ಚಲಿಕೆ ಬರೆದು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.