October 13, 2025
WhatsApp Image 2024-02-23 at 11.36.19 AM

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚಿಕಿತ್ಸಾ ದರಪಟ್ಟಿ ಅಳವಡಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿ ಹಾಕದೇ ರೋಗಿಗಳಿಂದ ಮನಬಂದಂತೆ ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಚಾಟಿ ಬೀಸಿದೆ.

ರಾಜ್ಯದಲ್ಲಿ ಖಾಸಗೀ ಆಸ್ಪತ್ರೆಗಳಲ್ಲಿ ತಮಗೆ ಇಷ್ಟಬಂದಂತೆ ರೋಗಿಗಳಿಗೆ ಚಿಕಿತ್ಸೆಯ ದರವನ್ನು ವಿಧಿಸಲಾಗುತ್ತಿವೆ. ಈ ದರಪಟ್ಟಿಯಿಂದಾಗಿ ರಾಜ್ಯದಲ್ಲಿನ ಜನರು ಸುಲಿಗೆಗೆ ಒಳಗಾಗಿದ್ದು, ಬಡವರು, ಮಧ್ಯಮ ವರ್ಗದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಎಂಬುದೇ ಸಿಂಹಸ್ವಪ್ನವಾದಂತೆ ಆಗಿದೆ ಎನ್ನಲಾಗುತ್ತಿದೆ.

ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ, ಆರೋಗ್ಯ ಇಲಾಖೆಗೆ ಸಾರ್ವಜನಿಕರು ವಿವಿಧ ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರು ಸಲ್ಲಿಸಲಾಗಿತ್ತು. ಈ ದೂರಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಚಿಕಿತ್ಸಾ ದರಪಟ್ಟಿ ಬೋರ್ಡ್ ಹಾಕುವುದನ್ನು ಕಡ್ಡಾಯಗೊಳಿಸುವಂತೆ ಆದೇಶ ಹೊರಡಿಸಲು ಆರೋಗ್ಯ ಇಲಾಖೆಗೆ ಸೂಚಿಸಿದ್ದರು.

ಆರೋಗ್ಯ ಸಚಿವರ ಸೂಚನೆಯಂತೆ ಆರೋಗ್ಯ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚಿಕಿತ್ಸಾ ದರಪಟ್ಟಿಯ ಬೋರ್ಡ್ ಅಳವಡಿಸುವಂತೆ ಖಡಕ್ ಸೂಚನೆಯನ್ನು ಹೊರಡಿಸಿದೆ. ಒಂದು ವೇಳೆ ಈ ನಿಯಮವನ್ನು ಪಾಲಿಸದೇ ಇದ್ದರೇ, ಅಂತಹ ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದೆ.

About The Author

Leave a Reply